ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ 'ಚಂದ್ರಯಾನ-3' ರ ಬಾಹ್ಯಾಕಾಶ ನೌಕೆಯ ಕಕ್ಷೆ ಬದಲಾವಣೆ ಸೋಮವಾರ ನಡೆದಿದ್ದು, ನೌಕೆಯನ್ನು ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರ ಒಯ್ಯಲಾಗಿದೆ.
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ 'ಚಂದ್ರಯಾನ-3' ರ ಬಾಹ್ಯಾಕಾಶ ನೌಕೆಯ ಕಕ್ಷೆ ಬದಲಾವಣೆ ಸೋಮವಾರ ನಡೆದಿದ್ದು, ನೌಕೆಯನ್ನು ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರ ಒಯ್ಯಲಾಗಿದೆ.
'ಚಂದ್ರನ ಸನಿಹದ ವೃತ್ತಾಕಾರದ ಕಕ್ಷೆಗೆ ಬಾಹ್ಯಾಕಾಶವನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಇಸ್ರೊ ತಿಳಿಸಿದೆ.
ಜುಲೈ 14 ರಂದು ಉಡಾವಣೆಗೊಂಡ ಚಂದ್ರಯಾನ-3 ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು. ಆ. 6 ಮತ್ತು 9 ರಂದು ಎರಡು ಬಾರಿ ಕಕ್ಷೆಗಳ ಬದಲಾವಣೆ ಮಾಡಲಾಗಿತ್ತು. ಚಂದ್ರನ ಕಕ್ಷೆಗೆ ಪರಿಚಲನೆ ಘಟ್ಟ ಆರಂಭಗೊಂಡಿದೆ. ಇವತ್ತಿನ ಕಕ್ಷೆ ಬದಲಾವಣೆಯಿಂದ ನೌಕೆಯು ಚಂದ್ರನ ಅತಿ ಸನಿಹದ ವೃತ್ತಾಕಾರದ ಕಕ್ಷೆಗೆ ಸೇರಿದಂತಾಗಿದೆ ಎಂದು ತಿಳಿಸಿದೆ.
ಮುಂದಿನ ಕಕ್ಷೆ ಬದಲಾವಣೆ ಬುಧವಾರ ಬೆಳಿಗ್ಗೆ 8.30ಕ್ಕೆ ನಡೆಯಲಿದೆ. ಚಂದ್ರನಿಗೆ ಹತ್ತಿರವಾಗುತ್ತಿದ್ದಂತೆ ಬಾಹ್ಯಾಕಾಶ ನೌಕೆಯ ಚಲನೆಯನ್ನು ಅತಿ ಕುಶಲತೆಯಿಂದ ನಡೆಸಲಾಗುವುದು. ಚಂದ್ರನಲ್ಲಿ ನಿಶ್ಚಿತವಾದ ಧ್ರುವದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸುವುದಕ್ಕೆ ಪೂರಕವಾಗಿ ಕಕ್ಷೆ ಮತ್ತು ನೌಕೆಯ ಸ್ಥಿತಿಯನ್ನು ತಗ್ಗಿಸಿ ಸನ್ನದ್ಧಗೊಳಿಸಲಾಗುತ್ತದೆ. ಇದೇ 23 ರಂದು ಲ್ಯಾಂಡರ್‌ನ ಚಂದ್ರ ಸ್ಪರ್ಶದ ಕೆಲಸ ನಡೆಯಲಿದೆ ಎಂದು ಇಸ್ರೊ ಹೇಳಿದೆ.