ಪೆರ್ಲ: ನಲ್ಕದ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಂದು ಮುಖ್ಯ ಶಿಕ್ಷಕ ಶ್ರೀಪತಿ ಎನ್ ಧ್ವಜಾರೋಹಣಗೈದು ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಗ್ರಾ.ಪಂ. ಸದಸ್ಯೆ ಆಶಾಲತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆಐದರು. ಈ ಸಂದರ್ಭದಲ್ಲಿ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರಾದ ರೋಹಿಣಿ ಖಂಡಿಗೆ ಮತ್ತು ವನಿತಾ ಸ್ವರ್ಗ ಅವರನ್ನು ಗ್ರಾ.ಪಂ. ಸದಸ್ಯೆ ಆಶಾಲತಾ ಅಭಿನಂದಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ್ ವರ್ಮುಡಿ, ಮಾತೃ ರಕ್ಷಕ ಸಂಘದ ಅಧ್ಯಕ್ಷೆ ರೇಖಾ ಬಿರ್ಮೂಲೆ ಶುಭಾಶಂಶನೆಗೈದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಮಕ್ಕಳಿಂದ ಮೆರವಣಿಗೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ವಾತಂತ್ರ್ಯ ಯೋಧರ ವೇಷ ಧರಿಸಿ ಪುಟಾಣಿಗಳು ಮನಸೆಳೆದರು. ನಿವೃತ್ತ ಬ್ಯಾಂಕ್ ಪ್ರಬಂಧಕ, ಶಾಲಾ ಹಳೆವಿದ್ಯಾರ್ಥಿ ನಾರಾಯಣ ನಾಯ್ಕ ಕುದುಕ್ಕುಳಿ ಅವರು ಸ್ವರಚಿತ ದೇಶಭಕ್ತಿ ಗೀತೆಯನ್ನು ಹಾಡಿದರು. ಶ್ರೀಪತಿ ಎನ್ ಸ್ವಾಗತಿಸಿ, ನಳಿನಿ ವಂದಿಸಿದರು. ಉಷಾ ದೇವಿ, ಮಮತಾ, ಮಶ್ ಹುದಾ, ಕಾವ್ಯಶ್ರೀ ಸಹಕರಿಸಿದರು.