HEALTH TIPS

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಂದು ತಿಂಗಳೊಳಗೆ ಭಾರತ-ಬ್ರಿಟನ್ ಸಹಿ

             ನವದೆಹಲಿ: ಬ್ರಿಟನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್‌ಟಿಎ) ಭಾರತ ಸಜ್ಜಾಗುತ್ತಿದ್ದು, ಈ ಸಂಬಂಧ 12ನೇ ಸುತ್ತಿನ ಮಾತುಕತೆ ಬುಧವಾರ ದೆಹಲಿಯಲ್ಲಿ ಆರಂಭವಾಗಿದೆ.

              "ಎಲ್ಲವೂ ಅಂದುಕೊಂಡಂತೆ ನಡೆದರೆ, ಬಹುನಿರೀಕ್ಷಿತ ಎಫ್‌ಟಿಎಗೆ ಒಂದು ತಿಂಗಳೊಳಗೆ ಉಭಯ ದೇಶಗಳು ಸಹಿ ಹಾಕಲಿವೆ. ಈ ಮೂಲಕ ಸ್ಕಾಚ್ ವಿಸ್ಕಿಯ ಆಮದು ಮೇಲಿನ ಅಬಕಾರಿ ಸಮಸ್ಯೆಯು ಭಾರತದ ವಿಸ್ಕಿ ತಯಾರಕರು ಮತ್ತು ಸ್ಕಾಚ್ ವಿಸ್ಕಿ ತಯಾರಕರ ನಡುವೆ ಸೌಹಾರ್ದಯುತವಾಗಿ ಇತ್ಯರ್ಥವಾಗುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ.

                11ನೇ ಸುತ್ತಿನ ಚರ್ಚೆಯಲ್ಲಿ, 26 ಅಧ್ಯಾಯಗಳು/ನೀತಿಗಳಲ್ಲಿ ಸುಮಾರು 19 ಅಂತಿಮಗೊಂಡಿದ್ದು, ಕೆಲವು ಸಮಸ್ಯೆಗಳು ಉಳಿದಿದ್ದು, ಅವುಗಳ ಬಗ್ಗೆ 12ನೇ ಸುತ್ತಿನ ಕೊನೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

                ಆಗಸ್ಟ್ 21 ಮತ್ತು 25 ರ ನಡುವೆ ನಡೆಯಲಿರುವ G20 ವ್ಯಾಪಾರ ಮತ್ತು ಹೂಡಿಕೆ ಸಭೆಯಲ್ಲಿ ಭಾಗವಹಿಸಲು ಬ್ರಿಟಿಷ್ ವಾಣಿಜ್ಯ ಸಚಿವರು ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.

               ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ನಂತರ ಭಾರತ-ಯುಕೆ ಎಫ್‌ಟಿಎ ಒಪ್ಪಂದ ವಿಳಂಬವಾಯಿತು. ಈಗ ಮತ್ತೆ ಉಭಯ ದೇಶಗಳ ನಡುವೆ ಮಾತುಕತೆ ವೇಗ ಪಡೆದುಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries