ಪೆರ್ಲ : ಸಮಾಜದ ಅಶಕ್ತ ಜನತೆಗೆ ಸಹಾಯ ಒದಗಿಸುತ್ತಿರುವ ಸಂಘಟನೆ ಅಮೃತದೀಪ ಪೆರ್ಲ ವತಿಯಿಂದ ಎರಡನೇ ವರ್ಷದ 'ಅಮೃತದೀಪ ಕೆಸರು ಗದ್ದೆ ಉತ್ಸವ-2023' ಬಜಕೂಡ್ಲು ಅನೊರ್ದಿ ಬಯಲಿನಲ್ಲಿ ಆ. 13ರಂದು ನಡೆಯಲಿದೆ. ಕೆಸರುಗದ್ದೆಯಲ್ಲಿ ದಿನಪೂರ್ತಿ ಗ್ರಾಮೀಣ ಸೊಗಡಿನ ಕ್ರೀಡಾಕೂಟ, ಅಮೃತದೀಪ ಆಶ್ರಯ ಯೋಜನೆಯ ಸಾಮಾಜಿಕ ಬದ್ಧತೆಯನ್ವಯ ಎನ್ಮಕಜೆ ಪಂಚಾಐಇತಿಯ ಕಜಂಪಾಡಿಯಲ್ಲಿ ಜಯಮ್ಮ ಎಂಬವರಿಗೆ ನಿರ್ಮಿಸಿಕೊಟ್ಟಿರುವ ನೂತನ ಮನೆಯ ಕೀಲಿಕೈ ಹಸ್ತಾಂತರ, ಸಾಧಕರಿಗೆ ಸನ್ಮಾನ ಸೇರಿದಂತೆ ನಾನಾ ಕಾರ್ಯಕ್ರಮ ನಡೆಯುವುದು.
ಹಲವು ಮುಖಂಡರು ಭಾಗಿ:
ಸಾಮಾಜಿಕ ಮುಂದಾಳು, ಪ್ರಖರ ವಾಗ್ಮಿ ಶೋಭಾ ಸುರೇಂದ್ರನ್, ಕೋಯಿಕ್ಕೋಡ್ ಟ್ರಾಫಿಕ್ ಎಸ್.ಪಿ ಹರೀಶ್ಚಂದ್ರ ನಾಯ್ಕ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಗೌತಮ್ ಪ್ರಸಾದ್ ಶೆಟ್ಟಿ ಎಣ್ಮಕಜೆ, ರಂಗ ಕಲಾವಿದೆ ಸೌಮ್ಯಾ ಪಾಣಾಜೆ ಮೊದಲಾದವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕೆಸರುಗದ್ದೆ ಉತ್ಸವದಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳಿಗಾಗಿ ಆಯೋಜಿಸಲಾದ ಅಮೃತದೀಪ ಜೆರ್ಸಿ ಬಿಡುಗಡೆ ಸಮಾರಂಭ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ಅಮೃತದೀಪ ಕೆಸರುಗದ್ದೆ ಉತ್ಸವ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.