ನವದೆಹಲಿ: ಟೊಮ್ಯಾಟೋ ನಂತರ ಈಗ ಈರುಳ್ಳಿ ಬೆಲೆ ನಿರಂತರವಾಗಿ ಏರಲಾರಂಭಿಸಿದೆ. ಆದರೆ, ಬೆಲೆ ನಿಯಂತ್ರಣಕ್ಕೆ ಸರ್ಕಾರ ಶೀಘ್ರ ಸಿದ್ಧತೆ ಆರಂಭಿಸಿದೆ. ಭಾರತ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಕಳೆದ ನಾಲ್ಕು ದಿನಗಳಲ್ಲಿ ರೈತರಿಂದ ನೇರವಾಗಿ 2,826 ಟನ್ ಈರುಳ್ಳಿ ಖರೀದಿಸಿದೆ.
ಎನ್‌ಸಿಸಿಎಫ್ ಆಗಸ್ಟ್ 22 ರಂದು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ರೈತರಿಂದ ನೇರ ಖರೀದಿಯನ್ನು ಪ್ರಾರಂಭಿಸಿತು. ಮಹಾರಾಷ್ಟ್ರದಲ್ಲಿ ಸುಮಾರು 12-13 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಒಟ್ಟಾರೆ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 2,826 ಟನ್ ಈರುಳ್ಳಿಯನ್ನು ಸಂಗ್ರಹಿಸಿದ್ದು, ಮಹಾರಾಷ್ಟ್ರದಿಂದ ಹೆಚ್ಚಿನ ಖರೀದಿ ಮಾಡಲಾಗಿದೆ. ಒಟ್ಟು ಒಂದು ಲಕ್ಷ ಟನ್ ಖರೀದಿಸುವ ಗುರಿ ಹೊಂದಲಾಗಿದೆ. ಎನ್‌ಸಿಸಿಎಫ್ ರೈತರಿಂದ ನೇರವಾಗಿ ಈರುಳ್ಳಿಯನ್ನು ಕ್ವಿಂಟಲ್‌ಗೆ 2410 ರೂ.ಗೆ ಖರೀದಿಸುತ್ತಿದೆ, ಇದು ಪ್ರಸ್ತುತ ಸಗಟು ದರ ಕ್ವಿಂಟಲ್‌ಗೆ 1900-2000 ರೂ.ಗಿಂತ ಹೆಚ್ಚಾಗಿದೆ.
ಇನ್ನು ಕೆಲವೇ ತಿಂಗಳುಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳು ನಡೆಯಲಿವೆ. ಪ್ರತಿಪಕ್ಷಗಳು ಈರುಳ್ಳಿ ಬೆಲೆ ಏರಿಕೆಯನ್ನು ಸಮಸ್ಯೆಯಾಗಿಸಲು ಸರ್ಕಾರ ಬಯಸುವುದಿಲ್ಲ. ಅದಕ್ಕಾಗಿಯೇ ಸರ್ಕಾರವು ಪ್ರತಿಯೊಂದು ಸಂದರ್ಭದಲ್ಲೂ ಬೆಲೆ ನಿಯಂತ್ರಣದಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈರುಳ್ಳಿಗೆ ದಾಸ್ತಾನು ಗುರಿಯನ್ನು ಮೂರು ಲಕ್ಷ ಟನ್‌ಗಳಿಂದ ಐದು ಲಕ್ಷ ಟನ್‌ಗಳಿಗೆ ಹೆಚ್ಚಿಸಿದೆ.
ರಫ್ತಿನ ಮೇಲೆ ಸಹ ಸಂಪೂರ್ಣ ನಿರ್ಬಂಧಗಳನ್ನು ವಿಧಿಸಲಾಗಿದೆ. ರಫ್ತು ನಿಷೇಧದಿಂದ ರೈತರ ಶ್ರಮ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈರುಳ್ಳಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತಿದೆ. ರೈತರಿಂದ ಒಂದು ಲಕ್ಷ ಟನ್ ಈರುಳ್ಳಿ ಖರೀದಿಸಲು ಎನ್‌ಸಿಸಿಎಫ್‌ಗೆ ತಿಳಿಸಲಾಗಿದೆ. ಸರ್ಕಾರ ಈಗ ಮಾಡುತ್ತಿರುವ ಪ್ರಯತ್ನಗಳ ಪ್ರಕಾರ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುವುದು ಖಚಿತ. ಇದಕ್ಕಾಗಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಖರೀದಿ ಮಾಡುತ್ತಿದೆ. ರೈತರಿಂದ ಒಂದು ಲಕ್ಷ ಟನ್ ಈರುಳ್ಳಿ ಖರೀದಿಸಲು ಎನ್‌ಸಿಸಿಎಫ್‌ಗೆ ತಿಳಿಸಲಾಗಿದೆ. ಸರ್ಕಾರ ಈಗ ಮಾಡುತ್ತಿರುವ ಪ್ರಯತ್ನಗಳ ಪ್ರಕಾರ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುವುದು ಖಚಿತ.