ಈ ಶ್ರಾವಣ ಮಾಸವು ಶಿವನಿಗೆ ವಿಶೇಷ ಮಾಸ ಆಗಿರೋದ್ರಿಂದ ಶಿವನನ್ನು ಭಕ್ತಿ-ಭಾವದಿಂದ ಆರಾಧನೆ ಮಾಡಲಾಗುತ್ತದೆ. ಅದ್ರಲ್ಲೂಈ ವರ್ಷ ಬರೋಬ್ಬರಿ ಎರಡು ತಿಂಗಳುಗಳ ಕಾಲ ಶ್ರಾವಣ ಮಾಸ ಇರಲಿದ್ದು, ಈ ಸಮಯದಲ್ಲಿ ನೀವು ಸಂಪೂರ್ಣವಾಗಿ ಶಿವನ ಧ್ಯಾನದಲ್ಲೇ ತಲ್ಲೀನರಾದರೆ ತುಂಬಾನೇ ಒಳ್ಳೆಯದು.
ಶ್ರಾವಣ ಮಾಸದಲ್ಲಿ ಹಿಂದೂಗಳು ಹೆಚ್ಚಾಗಿ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರೆ. ಈ ಸಮಯದಲ್ಲಿ ಮನೆಯಲ್ಲಿ ಪ್ರತಿ ದಿನ ಸ್ಪೆಷಲ್ ತಿಂಡಿಯನ್ನೇ ಮಾಡಬೇಕಾಗುತ್ತದೆ. ಆದ್ರೆ ದಿನಾ ಏನಪ್ಪಾ ಸ್ಪೆಷಲ್ ಮಾಡೋದು ಅಂತ ಮಹಿಳೆಯರು ತಲೆ ಕೆಡಿಸಿಕೊಂಡಿರ್ತಾರೆ. ನಾವು ಇವತ್ತು ನಿಮಗೆ ಅಂತಹದ್ದೇ ಒಂದು ಸ್ಪೆಷಲ್ ರೆಸಿಪಿ ಬಗ್ಗೆ ತಿಳಿಸಿ ಕೊಡ್ತೀವಿ.ಈ ತಿಂಡಿ ತಿನ್ನೋದಕ್ಕೆ ಎಷ್ಟು ರುಚಿಯಾಗಿ ಇರುತ್ತೋ ಅದ್ರ ಜೊತೆಗೆ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಅಷ್ಟಕ್ಕು ಯಾವುದು ಆ ಸೂಪರ್ ತಿಂಡಿ ಯಾವುದು ಅಂತ ತಿಳಿಯೋಣ.
ಸುಲಭವಾಗಿ ತಯಾರಾಗುತ್ತೆ ಈ ಸ್ಪೆಷಲ್ ಚಿತ್ರಾನ್ನ!
ಚಿತ್ರಾನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಇಷ್ಟ ಪಟ್ಟು ತಿನ್ನುವ ಬೆಳಗ್ಗಿನ ಉಪಹಾರವಿದು. ಕೆಲವರಂತೂ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಕೂಡ ಚಿತ್ರಾನ್ನ ತಿಂದು ಬದುಕುವವರು ಕೂಡ ಇದ್ದಾರೆ. ಇನ್ನೂ ಚಿತ್ರಾನ್ನ ಮಾಡೋದಕ್ಕೂ ಕೂಡ ತುಂಬಾನೇ ಸುಲಭ. ಫಟಾಫಟ್ ಅಂತ ತಯಾರಾಗಿ ಬಿಡುತ್ತೆ.
ಇದೇ ಕಾರಣಕ್ಕೆ ಕ್ವಿಕ್ ಆಗಿ ಏನಾದ್ರು ತಿಂಡಿ ಮಾಡ್ಬೇಕು ಅಂತ ಆಲೋಚಿಸಿದಾಗ ಮನೆಯಲ್ಲಿ ಈ ಚಿತ್ರಾನ್ನ ರೆಡಿಯಾಗುತ್ತೆ. ನೀವು ಟೊಮೊಟೋ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನ ಹಾಗೂ ಮಸಾಲಾ ಚಿತ್ರಾನ್ನನೂ ತಿಂದಿರ್ಬಹುದು. ಆದ್ರೆ ನೀವು ಎಂದಾದ್ರೂ ವೀಳ್ಯದೆಲೆ ಚಿತ್ರಾನ್ನ ತಿಂದಿದ್ದೀರಾ? ಖಂಡಿತ ಇಲ್ಲಾ ಅಲ್ವಾ?
ಮನೆಯಲ್ಲೇ ತಯಾರಿಸಿ ವೀಳ್ಯದೆಲೆ ಚಿತ್ರಾನ್ನ!
ಈ ಶ್ರಾವಣ ಮಾಸದಲ್ಲಿ ಪೂಜೆ-ಪುನಸ್ಕಾರಗಳನ್ನು ಹೆಚ್ಚಾಗಿ ಮಾಡೋದ್ರಿಂದ ಮನೆಯಲ್ಲಿ ಬೇಕಾದಷ್ಟು ವೀಳ್ಯದೆಲೆ ಇರುತ್ತೆ. ಕೆಲವೊಂದು ಸಲ ಈ ವೀಳ್ಯದೆಲೆಯನ್ನು ಏನು ಮಾಡೋದಪ್ಪಾ ಅಂತ ಯೋಚಿಸೋದಕ್ಕೆ ಶುರು ಮಾಡ್ತೀವಿ ಅಂತಹ ಸಂದರ್ಭದಲ್ಲಿ ನೀವು ಈ ವೀಳ್ಯದೆಲೆ ಚಿತ್ರಾನ್ನ ಮಾಡ್ಬಹುದು.
ಈ ವೀಳ್ಯದೆಲೆ ಚಿತ್ರಾನ್ನ ತಿನ್ನೋದಕ್ಕೆ ಎಷ್ಟು ರುಚಿಯಾಗಿರುತ್ತೋ ಅದ್ರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಕೂಡ ತುಂಬಾನೇ ಒಳ್ಳೆಯದು. ಈ ರೀತಿ ಚಿತ್ರಾನ್ನ ಮಾಡಿ ತಿನ್ನೋದ್ರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ವೀಳ್ಯದೆಲೆಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳೇನು?
ಕೆಮ್ಮು ಮತ್ತು ಕಫದ ಸಮಸ್ಯೆ ನಿವಾರಣೆ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತೆ ತಲೆನೋವು ನಿವಾರಣೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಮೊಡವೆ ನಿವಾರಣೆ ತೂಕ ಇಳಿಕೆ ಆಹಾರ ಜೀರ್ಣವಾಗಲು ಇತ್ಯಾದಿ ವೀಳ್ಯದೆಲೆ ಸಕಲ ರೋಗಗಳಿಗೆ ರಾಮಬಾಣ ಅಂತಾನೇ ಹೇಳಬಹುದು. ಈ ಶ್ರಾವಣ ಮಾಸದಲ್ಲಿ ಈ ವೀಳ್ಯದೆಲೆಯಿಂದ ಸ್ಪೆಷಲ್ ಚಿತ್ರಾನ್ನ ತಯಾರಿಸಿ ಸವಿಯಬಹುದು.tanu.katta