ಬದಿಯಡ್ಕ: ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬದಿಯಡ್ಕ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಗಣೇಶ ಮಂದಿರದಲ್ಲಿ ಜರಗಿತು.
ಅಧ್ಯಕ್ಷ ಜಯರಾಮ ಬಿ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಗೋಕುಲದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಲೂಕು ಅಧ್ಯಕ್ಷ ದಿನೇಶ ಮಾಸ್ತರ್ ಸ್ಮರಣಿಕೆ ನೀಡಿದರು. ಕೋಶಾಧಿಕಾರಿ ಭಾಸ್ಕರ ಎನ್. ಮಾತನಾಡಿದರು. ದಾಮೋದರ ಚೆಟ್ಟಿಯಾರ್, ಯೋಗೀಶ್ ಪೊಡಿಪ್ಪಳ್ಳ, ವಿಜಯಸಾಯಿ, ನಾರಾಯಣ, ಲಲಿತ, ಸಂಜೀವ, ಕಸ್ತೂರಿ, ಶಾಂತ ಕುಮಾರಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಸಪ್ತಂಬರ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕೃಷ್ಣ ರಾಧೆಯರ ವೇಷದೊಂದಿಗೆ ಆಕರ್ಷಕ ಶೋಭಾಯಾತ್ರೆ, ಧಾರ್ಮಿಕ ಕಾರ್ಯಕ್ರಮ, ಸ್ಪರ್ಧೆಗಳು, ಆಟೋಟ ಸ್ಪರ್ಧೆಗಳು, ದೇಶಭಕ್ತಿಗೀತೆ, ಭಗವದ್ಗೀತೆ ಮೊದಲಾದ ಸ್ಪರ್ದೆಗಳೂ ನಡೆಯಲಿದೆ. ರೇಶ್ಮಾ ಪ್ರಾರ್ಥನೆ ಹಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ಕೆ. ಸ್ವಾಗತಿಸಿ, ಉಪಾಧ್ಯಕ್ಷ ವಕೀಲ ಗಣೇಶ್ ಬಿ. ವಂದಿಸಿದರು.