ಕಾಸರಗೋಡು : ಚಿನ್ಮಯ ವಿದ್ಯಾಲಯ ಕಾಸರಗೋಡಿನಲ್ಲಿ 2023-24 ಸಾಲಿನ ಚುನಾಯಿತ ಶಾಲಾ ವಿದ್ಯಾರ್ಥಿ ನಾಯಕರ ಪ್ರತಿಜ್ಞಾ ವಿಧಿ ಸಮಾರಂಭವು ನೆರವೇರಿತು.
ಶಾಲಾ ನಾಯಕನಾಗಿ 12ನೇ ತರಗತಿಯ ಅರ್ಜುನ್ ವಿ.ಸಿ, ಶಾಲಾ ನಾಯಕಿಯಾಗಿ 12ನೇ ತರಗತಿಯ ಜಿ.ವಿ ರೂಪಶ್ರೀ, ಶಾಲಾ ಉಪನಾಯಕನಾಗಿ 11ನೇ ತರಗತಿಯ ಅರ್ಜುನ್.ಎಂ, ಶಾಲಾ ಉಪನಾಯಕಿಯಾಗಿ 11ನೇ ತರಗತಿಯ ಜಿಯಾ ಖಲೀಲ್, ಕಲೋತ್ಸವ ಕಾರ್ಯದರ್ಶಿಯಾಗಿ ಶ್ರೇಯ. ಯು, ಮ್ಯಾಗಝೀನ್( ಪತ್ರಿಕಾ ) ಸಂಪಾದಕಿಯಾಗಿ 11ನೇ ತರಗತಿಯ ಶಿವಾನಿ.ಎಸ್.ನಾಯರ್, ಕ್ರೀಡಾ ನಾಯಕನಾಗಿ 12ನೇ ತರಗತಿಯ ಮೊಹಮ್ಮದ್ ಖತೀಬ್ ಮಿನ್ಹಜ್ ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಿದ್ಯಾಲಯದ ಪ್ರಾಂಶುಪಾಲರಾದ ಸುನಿಲ್ ಕುಮಾರ್ ಪ್ರತಿಜ್ಞಾ ವಿಧಿ ನಿರ್ವಹಿಸಿದರು.
ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಜಿಯವರು ತನ್ನ ಆಶೀರ್ವಚನದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯವು ಉನ್ನತ ಮಟ್ಟದ ಕಲಿಯುವಿಕೆ ಹಾಗೂ ಶಿಸ್ತುಬದ್ಧ ವಿದ್ಯಾರ್ಥಿ ಸಮುದಾಯ ಕ್ಕೂ ಹೆಸರಾಗಿದೆ. ಇಂದು ಆಯ್ಕೆಗೊಂಡ ಶಾಲಾ ನಾಯಕರು ವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೂ ವಿದ್ಯಾರ್ಥಿ ಸಮುದಾಯದಲ್ಲಿ ಶಿಸ್ತನ್ನು ಬೆಳೆಸುವಲ್ಲಿಯೂ ಕಾರ್ಯೋನ್ಮುಖರಾಗಬೇಕು. ಉಳಿದವರೆಲ್ಲರೂ ಅವರಿಗೆ ಸಹಾಯ ಸಹಕಾರ ನೀಡಬೇಕು. ಈ ವರ್ಷ ವಿದ್ಯಾಲಯವು ಮಹತ್ತರ ಬೆಳವಣಿಗೆಯನ್ನು ಹೊಂದುವಂತಾಗಲಿ ಎಂದು ಆಶೀರ್ವದಿಸಿದರು.
ಶಾಲಾ ಪ್ರಾಂಶುಪಾಲರಾದ ಸುನಿಲ್ ಕುಮಾರ್, ಉಪ ಪ್ರಾಂಶುಪಾಲರಾದ ಪ್ರಶಾಂತ. ಬಿ, ಬ್ರಹ್ಮಚಾರಿಣಿ ರೋಜಿಷ ಉಪಸ್ಥಿತರಿದ್ದರು. ಕು /ನಿರಂಜನ ವಿನೋದ್ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ಹರ್ಷಿಣಿ ಹರಿಹರನ್ ಸ್ವಾಗತಿಸಿ, ಶಾಲಾ ಉಪನಾಯಕನಾದ ಅರ್ಜುನ್. ಎಂ ವಂದಿಸಿದರು.
ವಿವಿಧ ಸಂಘಗಳ ಉದ್ಘಾಟನಾ
ಚಿನ್ಮಯ ವಿದ್ಯಾಲಯದಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ನೆರವೇರಿತು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಸಂಘ ಚಟುವಟಿಕೆಗಳು ಮಕ್ಕಳನ್ನು ಚುರುಕುಗೊಳಿಸುತ್ತವೆ. ಶಾಲೆಗಳಲ್ಲಿ ಸಂಘ ಚಟುವಟಿಕೆಗಳು ಅಗತ್ಯ ಎಂಬುದನ್ನು ವಿವಿಧ ಸಂಘಗಳ ಉದ್ಘಾಟನೆಯನ್ನು ನಿರ್ವಹಿಸುತ್ತಾ ಕೇರಳ ಚಿನ್ಮಯ ಮಿಷನ್ ನ ಮುಖ್ಯಸ್ಥ ಹಾಗೂ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಜಿ ಅವರು ನುಡಿದರು.
ಶಾಲಾ
ಪ್ರಾಂಶುಪಾಲರಾದ ಸುನಿಲ್ ಕುಮಾರ್ ಅವರು ಸಂಘಗಳಿಂದ ಸಿಗುವ ವಿವಿಧ ಪ್ರಯೋಜನಗಳನ್ನು ತಿಳಿಸುತ್ತಾ,ನಮ್ಮ ಸುತ್ತು ಮುತ್ತಲಿನ ಹಲವಾರು ಬೆಳವಣಿಗೆಗಳು ಹಾಗೂ ತರಗತಿಯೊಳಗೆ ಸಿಗಲಾರದ ಹಲವು ಚಟುವಟಿಕೆಗಳು, ಈ ಸಂಘಗಳಿಂದ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಚಾರಿಣಿ ರೋಜಿಷ, ಶ್ರೀ ಪ್ರಶಾಂತ. ಬಿ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಪೂರ್ಣಿಮಾ ಎಸ್ ಆರ್, ಶ್ರೀಮತಿ ಸಿಂಧು ಶಶಿಂದ್ರ ನ್ ಉಪಸ್ಥಿತರಿದ್ದರು.