ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಆಚರಿಸಿದರು. ಶಾಲಾ ಬಾಲಕಿಯರು ಪ್ರಧಾನಿಯವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಮೋದಿ: ಬರ್ತಾರಾ ಪಾಕಿಸ್ತಾನದ ಸಹೋದರಿ?
0
ಆಗಸ್ಟ್ 30, 2023
Tags
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಆಚರಿಸಿದರು. ಶಾಲಾ ಬಾಲಕಿಯರು ಪ್ರಧಾನಿಯವರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಇದಕ್ಕೂ ಮುನ್ನ, ಸಾಮಾಜಿಕ ಮಾಧ್ಯಮ 'ಎಕ್ಸ್'(ಟ್ವಿಟರ್)ನಲ್ಲಿ ರಕ್ಷಾ ಬಂಧನದ ಶುಭಾಶಯ ತಿಳಿಸಿರುವ ಮೋದಿ, 'ಸಹೋದರ-ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಗಟ್ಟಿಗೊಳಿಸುವ ಈ ಹಬ್ಬವು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನ ಸಹೋದರಿ ಖಮರ್ ಮೊಹ್ಸಿನ್ ಶೇಖ್ ದೆಹಲಿಗೆ ಆಗಮಿಸಿ ರಾಖಿ ಕಟ್ಟುವ ಸಾಧ್ಯತೆ ಇದೆ.
'ಕೋವಿಡ್ ಕಾರಣದಿಂದ ಕಳೆದ 2-3 ವರ್ಷಗಳಿಂದ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಈ ವರ್ಷ ನಾನು ನನ್ನ ಕೈಯಾರೆ ತಯಾರಿಸಿದ ರಾಖಿ ಹಾಗೂ ಕೃಷಿ ಸಂಬಂಧಿ ಪುಸ್ತಕದೊಂದಿಗೆ ದೆಹಲಿಗೆ ತೆರಳಲಿದ್ದೇನೆ' ಎಂದು ಖಮರ್ ಈ ಹಿಂದೆ ಹೇಳಿದ್ದರು.