HEALTH TIPS

ಥ್ರೆಡ್ಸ್​ ಬಳಕೆದಾರರ ಸಂಖ್ಯೆಯಲ್ಲಿ ಅರ್ಧಕ್ಕೂ ಅಧಿಕ ಕುಸಿತ; ಆರಂಭದಲ್ಲಿದ್ದ ಜೋಶ್ ಈಗಿಲ್ಲ!

              ವದೆಹಲಿ: ಸೋಷಿಯಲ್​ ಮೀಡಿಯಾ ದಿಗ್ಗಜ ಫೇಸ್​ಬುಕ್​ನ ಮಾತೃಕಂಪನಿ ಮೆಟಾ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಟೆಕ್ಸ್ಟ್​ ಬೇಸ್ಡ್ ಸೋಷಿಯಲ್ ಮೀಡಿಯಾ ಥ್ರೆಡ್ಸ್​ ಆರಂಭದಲ್ಲಿ ಭರ್ಜರಿ ಸದ್ದು ಮಾಡಿದ್ದರೂ ಇದೀಗ ಅದರ ಬಳಕೆಯಲ್ಲಿ ಭಾರಿ ಕುಸಿತ ಉಂಟಾಗಿದೆ.

               ಟ್ವಿಟರ್​ಗೆ ಪರ್ಯಾಯ ಎಂದು ಹೇಳಲಾದ ಥ್ರೆಡ್ಸ್ ಈ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಂಡಿದ್ದು, ಐದೇ ದಿನಗಳಲ್ಲಿ 10 ಕೋಟಿ ಸೈನ್​ಇನ್ ಕಂಡಿತ್ತು.

                   ಆ ಮೂಲಕ ಅತಿ ಬೇಗ 10 ಕೋಟಿ ಸೈನ್​ಇನ್ ಹೊಂದಿದ ಮೊದಲ ಆಯಪ್ ಎಂಬ ಖ್ಯಾತಿಗೂ ಪಾತ್ರವಾಗಿತ್ತು.

               ಆದರೆ ಆರಂಭದ ಈ ಜೋಶ್ ಈಗ ಉಳಿದಿಲ್ಲ. ಥ್ರೆಡ್ಸ್​ ಸೈನ್​ಇನ್ ಆದವರ ಪೈಕಿ ಅರ್ಧಕ್ಕಿಂತಲೂ ಅಧಿಕ ಮಂದಿ ಅದನ್ನು ಬಳಸುವುದನ್ನು ನಿಲ್ಲಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೆಟಾ ಸಿಇಒ ಮಾರ್ಕ್​ ಜುಕರ್​​ಬರ್ಗ್​ ಕೂಡ ಕಂಪನಿಯ ಆಂತರಿಕ ಸಭೆಯಲ್ಲಿ ಕೂಡ ಇದನ್ನೇ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

                10 ಕೋಟಿಗೂ ಅಧಿಕ ಸೈನ್​ಇನ್​ ಆಗಿದ್ದೂ ಅಷ್ಟೂ ಮಂದಿ ಇಲ್ಲವೇ ಅದರ ಅರ್ಧದಷ್ಟಾದರೂ ಮಂದಿ ಬಳಕೆಯನ್ನು ಮುಂದುವರಿಸಿದರೆ ಅದು ಅದ್ಭುತ. ಆದರೆ ನಾವಿನ್ನೂ ಆ ಹಂತಕ್ಕೆ ತಲುಪಿಲ್ಲ ಎಂಬುದಾಗಿ ಮಾರ್ಕ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries