ಬೆಂಗಳೂರು: ಬಾಹ್ಯಾಕಾಶದಲ್ಲಿ 3 ಲಕ್ಷಕ್ಕೂ ಅಧಿಕ ದೂರ ಕ್ರಮಿಸಿದ ನಂತರ 'ಚಂದ್ರಯಾನ-3' ಗಗನನೌಕೆಯು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು. ಈ ಕುರಿತು ಗಗನನೌಕೆ ಸೆರೆಹಿಡಿದಿರುವ ಚಂದ್ರನ ಹೊರ ಮೇಲ್ಮೈ ವಿಡಿಯೊವನ್ನು ಚಂದ್ರಯಾನ-3 ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದೆ.

ಚಂದ್ರನಲ್ಲಿ ಇಳಿಯುವ ಮೊದಲು ಚಂದ್ರನ ಕಕ್ಷೆಯ ಮೂಲಕ ಈ ವಿಡಿಯೊಗಳನ್ನು ಸೆರೆ ಹಿಡಿಯಲಾಗಿದೆ ಎಂದು ಚಂದ್ರಯಾನ-3 ಟ್ವಿಟರ್ ಹ್ಯಾಂಡಲ್ ಹೇಳಿದೆ. ಈ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿವೆ. ಚಂದ್ರನ ಮೇಲೆ ಈ ನೌಕೆ ಇಳಿಯಲು ಇನ್ನೇನು 4,000 ಕಿಮೀ ಇದೆ ಎಂದು ತಿಳಿದು ಬಂದಿದೆ.
ಮುಂದಿನ 18 ದಿನಗಳ ಅವಧಿಯಲ್ಲಿ 'ಚಂದ್ರಯಾನ-3' ನೌಕೆಯ ವೇಗವನ್ನು ನಿಧಾನವಾಗಿ ಕಡಿಮೆ ಮಾಡಿ, ಅದನ್ನು ಚಂದ್ರನಿಂದ 100 ಕಿ.ಮೀ. ಅಂತರದ ಕೆಳ ಕಕ್ಷೆಗೆ ತರಲಾಗುತ್ತದೆ. ನಂತರ, ಆಗಸ್ಟ್ 23ರ ಸಂಜೆ 5.47ಕ್ಕೆ ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸುವ ಪ್ರಯತ್ನ ನಡೆಯುತ್ತಿದೆ.
'ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಬೆಂಗಳೂರಿನಲ್ಲಿರುವ ಇಸ್ರೊ ಟೆಲೆಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ' ಎಂದು ಇಸ್ರೊ ತಿಳಿಸಿದೆ.
ರೋವರ್ (ಪ್ರಜ್ಞಾನ್) ಹೊತ್ತ ಲ್ಯಾಂಡರ್ (ವಿಕ್ರಮ್) ಚಂದ್ರಯಾನ-3 ನೌಕೆಯಿಂದ ಬೇರ್ಪಟ್ಟು, ಚಂದ್ರನತ್ತ ಪಯಣ ಬೆಳೆಸಲಿದೆ.