ಬೀಜಿಂಗ್ : ತೈವಾನ್‌ನ ಆಸುಪಾಸಿನಲ್ಲಿ ವಾಯು ಮತ್ತು ಕಡಲ ಮಾರ್ಗದಲ್ಲಿ ಸೇನಾ ಕಸರತ್ತು ನಡೆಸುವ ಮೂಲಕ ಚೀನಾ ಶನಿವಾರ ದ್ವೀಪ ರಾಷ್ಟ್ರಕ್ಕೆ ಸ್ಪಷ್ಟ ಕಟ್ಟೆಚ್ಚರ ನೀಡಿದೆ. ತೈವಾನ್‌ನ ಉಪಾಧ್ಯಕ್ಷರು ಅಮೆರಿಕಕ್ಕೆ ಭೇಟಿ ನೀಡಿದ್ದ ಹಿಂದೆಯೇ ಚೀನಾ ಈ ಸಂದೇಶ ರವಾನಿಸಿದೆ.

ದ್ವೀಪ ರಾಷ್ಟ್ರದ ಮೇಲೆ ಹಕ್ಕು ಸ್ಥಾಪಿಸುವ ಚೀನಾದ ನಡೆಯನ್ನು ಬಲವಾಗಿ ವಿರೋಧಿಸುವ ಹಾಗೂ ತೈವಾನ್ ಅಧ್ಯಕ್ಷ ಸ್ಥಾನದ ಮುಂಚೂಣಿಯಲ್ಲಿರುವ ವಿಲಿಯಮ್ ಲೈ ಅವರು ಪರುಗ್ವೆಗೆ ಭೇಟಿ ನೀಡುವ ಸಂದರ್ಭದಲ್ಲಿ ನ್ಯೂಯಾರ್ಕ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೊಗೂ ಭೇಟಿ ನೀಡಿದ್ದರು.
ಅಮೆರಿಕದ ನಗರಗಳಿಗೆ ಭೇಟಿ ನೀಡಿದ್ದ ಕ್ರಮಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ಚೀನಾ, 'ಲೈ ಅವರು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ' ಎಂದು ಆರೋಪಿಸಿತ್ತು.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ನೌಕಾಪಡೆ ಮತ್ತು ವಾಯುಪಡೆಯು ತೈವಾನ್‌ನ ಆಸುಪಾಸಿನಲ್ಲಿ ಶನಿವಾರ ಸೇನಾ ಕಸರತ್ತು ನಡೆಸಿದವು ಎಂದು ಸೇನಾ ವಕ್ತಾರರ ಹೇಳಿಕೆ ಉಲ್ಲೇಖಿಸಿ ರಾಜ್ಯದ ಮಾಧ್ಯಮ ಕ್ಸಿನ್ಹುವಾ ವರದಿ ಮಾಡಿದೆ.
ತೈವಾನ್‌ನ ವಾಯುಗಡಿಯನ್ನು 42 ಯುದ್ಧ ವಿಮಾನಗಳು ಪ್ರವೇಶಿಸಿದ್ದವು. ಅಲ್ಲದೆ, ಚೀನಾದ ಎಂಟು ಹಡಗುಗಳು ಕಾರ್ಯಾಚರಣೆ ನಡೆಸಿವೆ ಎಂದು ದ್ವೀಪರಾಷ್ಟ್ರದ ರಕ್ಷಣಾ ಸಚಿವಾಲಯವು ಹೇಳಿಕೆ ನೀಡಿದೆ.