ಬದಿಯಡ್ಕ: ಕೇರಳ ರಾಜ್ಯ ಸರ್ಕಾರ ನಡೆಸುವ 2022-23 ಶೈಕ್ಷಣಿಕ ವರ್ಷದ ಎಲ್. ಎಸ್. ಎಸ್ - ಯು. ಎಸ್.ಎಸ್. ಸ್ಕಾಲರ್ ಶಿಪ್ ಅರ್ಹತಾ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಐದು ಮಂದಿ ವಿದ್ಯಾರ್ಥಿಗಳು ಸ್ಕೋಲರ್‍ಶಿಪ್‍ಗೆ ಅರ್ಹತೆಯನ್ನು ಪಡೆದಿರುತ್ತಾರೆ. ಯುಎಸ್‍ಎಸ್ ಪರೀಕ್ಷೆಯಲ್ಲಿ ಎಂಟನೆಯ ತರಗತಿಯ ಶಾತೋದರಿ ಪಿ ಎಮ್ ಹಾಗೂ ಕೆ ಅಕ್ಷಯ ವೆಂಕಟೇಶ, ಎಲ್‍ಎಸ್‍ಎಸ್ ಪರೀಕ್ಷೆಯಲ್ಲಿ ಐದನೆಯ ತರಗತಿಯ ಶ್ರಾವ್ಯ ಎಸ್, ಆಯುಷ್ ಕೃಷ್ಣ ಎಸ್, ಮತ್ತು ಅಭಿಜ್ಞಾ ಸಾವಿತ್ರಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.