ಕಾಸರಗೋಡು: ಮಕ್ಕಳ ಹಾಗು ಮಹಿಳೆಯರ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ರಂಗಚಿನ್ನಾರಿಯ ಕಲ್ಪನೆಯ ಕೂಸು ನಾರಿ ಚಿನ್ನಾರಿ ಕ್ರಿಯಾತ್ಮಕವಾದ ಪರಿಕಲ್ಪನೆ ಎಂದು ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಸೇವಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲಕ್ಷ್ಮೀ ಹೇಳಿದರು.
ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 8 ನೇ ಸರಣಿ ಕಾರ್ಯಕ್ರಮ ಓಣಂ ಸಂಧ್ಯಾ ಮತ್ತು ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ಐದು ಕೃತಿಗಳ ಬಿಡುಗಡೆ ಸಮಾರಂಭವನ್ನು ದೀಪ ಬೆಳಗಿಸಿ ಅವರು ಮಾತನಾಡಿದರು.
ನಾರಿ ಚಿನ್ನಾರಿ ಅಪೂರ್ವವಾದ ಕಲಾವೇದಿಕೆ. ಸುಪ್ತ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಈ ಸಂಸ್ಥೆಯ ಚಟುವಟಿಕೆ ಶ್ಲಾಘನೀಯ. ಸರಣಿ ಕಾರ್ಯಕ್ರಮದ ಮೂಲಕ ಪ್ರತಿಭೆಗಳನ್ನು ಹುಡುಕಿ ಅವರಿಗೆ ಅವಕಾಶ ಕಲ್ಪಿಸುತ್ತಿರುವುದು ಅಭಿನಂದನಾರ್ಹ ಎಂದರು.
ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ಏಕತಾರಿ ಸಂಚಾರಿ ಕೃತಿಯನ್ನು ಲೇಖಕಿ, ಕವಯತ್ರಿ ವಿಜಯಲಕ್ಷ್ಮಿ ಶಾನುಭೋಗ್, ರಾಮಧ್ಯಾನ ಚರಿತೆ ಕೃತಿಯನ್ನು ಕವಯತ್ರಿ, ಶಿಕ್ಷಕಿ ಸರ್ವಮಂಗಳ ಪುಣಿಚಿತ್ತಾಯ, ಶಿವರಾಮ ಕಾರಂತರ ಕನ್ನಡ ಪ್ರಜ್ಞೆ ಕೃತಿಯನ್ನು ಕವಯತ್ರಿ, ಸಿವಿಲ್ ಎಂಜಿನಿಯರ್ ದಿವ್ಯಾ ಗಟ್ಟಿ ಪರಕ್ಕಿಲ, ಕೊಕ್ಕೋ...ಕೋಕೋ ಕೃತಿಯನ್ನು ಕವಯತ್ರಿ, ಪ್ರಶಸ್ತಿ ಪುರಸ್ಕøತ ಕತೆಗಾರ್ತಿ ಸ್ನೇಹಲತಾ ದಿವಾಕರ್, ವಾಚಿಕೆ ಕೃತಿಯನ್ನು ಲೇಖಕಿ, ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಬಿಡುಗಡೆಗೊಳಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮಿ ಕೆ. ಪುಸ್ತಕ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಲೆಕ್ಕ ಪರಿಶೋಧಕಿ, ನಾರಿ ಚಿನ್ನಾರಿ ಗೌರವಾಧ್ಯಕ್ಷೆ ತಾರಾ ಜಗದೀಶ್ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಹಾಗು ನಾಟ್ಯ ಗುರು ವಿದುಷಿ ಶಶಿಕಲಾ ಟೀಚರ್ ಅವರನ್ನು ಗೌರವಿಸಲಾಯಿತು.
ನಾರಿ ಚಿನ್ನಾರಿ ಸದಸ್ಯೆಯರಿಂದ ತಿರುವಾದಿರ(ನಿರ್ದೇಶನ ಶರಣ್ಯ ನಾರಾಯಣನ್), ಧನ್ಯಾ ಮುರಳಿ ಆಸ್ರ(ಶಾಸ್ತ್ರೀಯ ನೃತ್ಯ), ಅಶ್ವತಿ(ಜಾನಪದ ನೃತ್ಯ), ಶರಣ್ಯ ನಾರಾಯಣನ್(ಓಣಂ ಹಾಡು), ಸ್ನಿಗ್ಧ ಕೃಷ್ಣ(`Áವಗೀತೆ), ಶೈಲಜಾ ಈಶ್ವರ್ ಭಟ್(ಹವ್ಯಕ ಗೀತೆ), ಸಮನ್ವಿತಾ (ದೇಶಭಕ್ತಿ ಗೀತೆ), ಬಿ.ಉನ್ನತಿ ಪೈ(ಭಕ್ತಿ ಗೀತೆ), ಕೃಪಾನಿಧಿ ಪಾರೆಕಟ್ಟ(ಏಕ ಪಾತ್ರಾಭಿನಯ) ಮೊದಲಾದವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ರಂಗಚಿನ್ನಾರಿಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.