ನವದೆಹಲಿ: ದೆಹಲಿ ಸಚಿವೆ ಅತಿಶಿ ಮರ್ಲೆನಾ ಅವರಿಗೆ ಸೇವಾ ಮತ್ತು ಸರ್ವೇಕ್ಷಣಾ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ವರ್ಗಾಯಿಸುವ ಕುರಿತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಶಿಫಾರಸನ್ನು ಲೆಫ್ಟಿನೆಂಟ್ ಗರ್ವನರ್ ವಿ.ಕೆ. ಸಕ್ಸೇನಾ ಅವರು ಅಂಗೀಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 8ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅತಿಶಿ ಅವರಿಗೆ ಇಲಾಖೆಗಳನ್ನು ವರ್ಗಾಯಿಸುವ ಕುರಿತು ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿಯ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಸ್ವೀಕರಿಸಲಾಗಿದೆ ಎಂದು ಗವರ್ನರ್ ನಿವಾಸದ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೌರಭ್ ಭಾರದ್ವಾಜ್ ಈ ಖಾತೆ ನಿಭಾಯಿಸುತ್ತಿದ್ದರು. 'ದೆಹಲಿ ಸೇವೆಗಳ ನಿಯಂತ್ರಣ ಮಸೂದೆ'ಯನ್ನು ರಾಜ್ಯಸಭೆ ಅಂಗೀಕರಿಸಿದ ಬೆನ್ನಲ್ಲೇ ಕೇಜ್ರಿವಾಲ್ ಈ ಕ್ರಮಕ್ಕೆ ಮುಂದಾಗಿದ್ದರು.
ಕಳೆದ ಜೂನ್‌ನಲ್ಲಿ ಸಂಪುಟ ಪುನರ್ ರಚಿಸಿ ಅತಿಶಿ ಅವರಿಗೆ ಕಂದಾಯ, ಯೋಜನೆ ಮತ್ತು ಆರ್ಥಿಕ ಇಲಾಖೆಗಳ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಹೊಸ ಜವಾಬ್ದಾರಿಯೂ ಸೇರಿ ಅತಿಶಿ ಅವರು ದೆಹಲಿ ಸರ್ಕಾರದ 14 ಖಾತೆಗಳನ್ನು ನಿಭಾಯಿಸಲಿದ್ದಾರೆ.