ತ್ರಿಶೂರ್: ಕರುವನ್ನೂರ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಸಿಪಿಎಂ. ಮುಖಂಡ ಎ.ಸಿ. ಮೊಯ್ತೀನ್ ಅವರು ಗುರುವಾರ(ನಾಳೆ) ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.
ನಿರಂತರ ರಜೆ ಇರುವ ಕಾರಣ ಹತ್ತು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ ದಾಖಲೆಗಳನ್ನು ಪಡೆದಿಲ್ಲ ಎಂದು ಇ-ಮೇಲ್ ಮೂಲಕ ಇಡಿಗೆ ಮಾಹಿತಿ ನೀಡಿದ್ದಾರೆ. ದಾಖಲೆಗಳನ್ನು ಪಡೆದು ಇನ್ನೊಂದು ದಿನ ಹಾಜರಾಗುವುದಾಗಿ ಮೊಯ್ತೀನ್ ಮಾಹಿತಿ ನೀಡಿದರು.
ಇದೇ ತಿಂಗಳ 22ರಂದು ತ್ರಿಶೂರ್‍ನಲ್ಲಿರುವ ಎ.ಸಿ.ಮೊಯ್ತೀನ್ ಮನೆಯಲ್ಲಿ ಇಡಿ ತಪಾಸಣೆ ನಡೆಸಿತ್ತು. 22 ಗಂಟೆಗಳ ಸುದೀರ್ಘ ದಾಳಿಯ ನಂತರ, ವಿವರವಾದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
2016-2018ರ ಅವಧಿಯಲ್ಲಿ ಅಕ್ರಮ ಸಾಲ ನೀಡಿ ಬ್ಯಾಂಕ್‍ನಲ್ಲಿ ಕೋಟ್ಯಂತರ ಠೇವಣಿ ವಂಚಿಸಿದ್ದಾರೆ ಎಂಬುದು ಪ್ರಕರಣ. 125 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ನಡೆಸಿದ ಆರೋಪದಲ್ಲಿ ಆಗ ಸಹಕಾರ ಸಚಿವರಾಗಿದ್ದ ಎ.ಸಿ.ಮೊಯ್ತೀನ್ ಶಾಮೀಲಾಗಿದ್ದಾರೆ ಎಂಬ ಆರೋಪವೂ ಇದೆ.
ಇದೇ ವೇಳೆ ಎ.ಸಿ. ಮೊಯ್ತೀನ್ ಅವರ ಬೇನಾಮಿ ಎನ್ನಲಾದ ಅನಿಲ್ ಸೇಠ್ ಇಂದು ಇಡಿ ಮುಂದೆ ಹಾಜರಾಗಿದ್ದಾರೆ. ಬ್ಯಾಂಕ್‍ನ ಮಾಜಿ ಶಾಖಾ ವ್ಯವಸ್ಥಾಪಕ ಬಿಜು ಕರೀಂ ಮತ್ತು ಕಮಿಷನ್ ಏಜೆಂಟ್ ಪಿಪಿ ಕಿರಣ್ ಇಡಿ ಮುಂದೆ ಹಾಜರಾಗಿದ್ದರು.