ನವದೆಹಲಿ: ಪತ್ರಕರ್ತ ಕೆಎಂ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಧಿಸಿ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಗೆ ಹಿನ್ನಡೆಯಾಗಿದೆ.
ನರಹತ್ಯೆಯ ಅಪರಾಧ ಉಳಿಯುತ್ತದೆ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸಾಂದರ್ಭಿಕ ಸಾಕ್ಷ್ಯದ ಪ್ರಕಾರ ನರಹತ್ಯೆಯ ಅಪರಾಧ ಸಾಧುವಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸಾಕ್ಷ್ಯ ನಿಲ್ಲುತ್ತದೆಯೇ ಎಂಬುದನ್ನು ವಿಚಾರಣೆಯಲ್ಲಿ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶ್ರೀರಾಮ್ ವೆಂಕಟರಾಮನ್ ಪರ ವಕೀಲರು, ಅತಿವೇಗದ ಚಾಲನೆಯು ನರಹತ್ಯೆಯಾಗಿಲ್ಲ ಮತ್ತು ಆದ್ದರಿಂದ ನರಹತ್ಯೆಯ ಆರೋಪ ನಿಲ್ಲುವುದಿಲ್ಲ ಎಂದು ವಾದಿಸಿದರು. ಆದರೆ ಈಗ ನರಹತ್ಯೆ ಪ್ರಕರಣವನ್ನು ರದ್ದುಗೊಳಿಸಲು ಯಾವುದೇ ಮಾನ್ಯ ಕಾರಣಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಇದು ವಿಚಾರಣೆಗೆ ಒಳಪಡಬೇಕಾದ ಪ್ರಕರಣ ಎಂದೂ ನ್ಯಾಯಾಲಯ ಪರಿಗಣಿಸಿದೆ.
ಈ ಹಿಂದೆ ಪ್ರಕರಣದಲ್ಲಿ ಶ್ರೀರಾಮ್ ವೆಂಕಟರಾಮನ್ ವಿರುದ್ಧದ ನರಹತ್ಯೆಯ ಆರೋಪ ಉಳಿಯುತ್ತದೆ ಎಂದು ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ಶ್ರೀರಾಮ್ ವೆಂಕಟರಾಮನ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಆಗಸ್ಟ್ 3, 2019 ರಂದು ರಾತ್ರಿ ಒಂದು ಗಂಟೆಯ ಸುಮಾರಿಗೆ ಕಾರು ಡಿಕ್ಕಿ ಹೊಡೆದು ಕೆ.ಎಂ.ಬಶೀರ್ ಸಾವನ್ನಪ್ಪಿದ್ದರು. ಶ್ರೀರಾಮ್ ವೆಂಕಟರಾಮನ್ ಕುಡಿದು ಅತಿವೇಗದಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿರುವುದು ಪ್ರಕರಣ. ತಿರುವನಂತಪುರಂ ಮ್ಯೂಸಿಯಂ ಪೆÇಲೀಸ್ ಠಾಣೆ ಬಳಿಯ ಸಾರ್ವಜನಿಕ ಕಚೇರಿ ಮುಂಭಾಗದಲ್ಲಿ ಈ ದುರ್ಘಟನೆ ನಡೆದಿದೆ.
ಮೊದಲ ಹಂತದಲ್ಲಿ ಶ್ರೀರಾಮ್ ವೆಂಕಟರಾಮನ್ ಅವರನ್ನು ಪ್ರಕರಣದಿಂದ ರಕ್ಷಿಸಲು ಪೆÇಲೀಸರು ಪ್ರಯತ್ನಿಸಿದ್ದರು.