ಪಾಲಕ್ಕಾಡ್: ಲಂಚ ಪ್ರಕರಣದಲ್ಲಿ ಫೀಲ್ಡ್ ಅಸಿಸ್ಟೆಂಟ್ ಬಂಧಿತನಾದÀ ನಂತರ ಪಾಲಕ್ಕಯಂ ಗ್ರಾಮ ಕಚೇರಿಯಲ್ಲಿ ಸಾಮೂಹಿಕ ವರ್ಗಾವಣೆ ನಡದಿದೆ.
ಇಲಾಖಾ ವಿಚಾರಣೆ ವರದಿ ಆಧರಿಸಿ ಗ್ರಾಮ ಕಚೇರಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಗ್ರಾಮ ಅಧಿಕಾರಿಯನ್ನು ಕಣ್ಣೂರಿಗೆ, ಗ್ರಾಮ ಸಹಾಯಕರನ್ನು ಅಟ್ಟಪಾಡಿ ತಾಲ್ಲೂಕಿಗೆ ಮತ್ತು ಕ್ಷೇತ್ರ ಸಹಾಯಕರನ್ನು ಪಾಲಕ್ಕಾಡ್ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.
ಮೇ 28 ರಂದು ಮಾಜಿ ಕ್ಷೇತ್ರ ಸಹಾಯಕ ಸುರೇಶ್ ಕುಮಾರ್ ಅವರನ್ನು ಲಂಚ ಪಡೆದಿದ್ದಕ್ಕಾಗಿ ಪಾಲಕ್ಕಾಡ್ ವಿಜಿಲೆನ್ಸ್ ಬಂಧಿಸಿತ್ತು. ಸುರೇಶ್ ಕುಮಾರ್ ಅವರ ಕೊಠಡಿಯಿಂದ ಲಂಚದ ಹಣವಾಗಿ 35 ಲಕ್ಷ ರೂ.ಗಳನ್ನು ವಿಜಿಲೆನ್ಸ್ ವಶಪಡಿಸಿಕೊಂಡಿದೆ. ಕೊಠಡಿಯಲ್ಲಿ ಹಣದ ಹೊರತಾಗಿ ಹಲವು ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಸುರೇಶ್ ಅವರ ಮನ್ನಾಕ್ರ್ಕಾಡ್ ಲಾಡ್ಜ್ ಕೊಠಡಿಯಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದಾಗ ವಸ್ತುಗಳು ಪತ್ತೆಯಾಗಿದ್ದವು.
ಸುರೇಶ್ ಹಣವನ್ನು ಮಾತ್ರ ಲಂಚವಾಗಿ ತೆಗೆದುಕೊಂಡಿಲ್ಲ. ಕೊಠಡಿಯಲ್ಲಿ ಬಟ್ಟೆ, ಜೇನು, ಉಪ್ಪಿನಕಾಯಿ ಡಬ್ಬಗಳು, ಪೆನ್ನುಗಳೂ ಪತ್ತೆಯಾಗಿವೆ. ಲಂಚವಾಗಿ ಸಿಕ್ಕಿದ್ದನ್ನೆಲ್ಲಾ ಸುರೇಶ್ ಕುಮಾರ್ ತೆಗೆದುಕೊಂಡಿದ್ದಾರೆ ಎಂದು ವಿಜಿಲೆನ್ಸ್ ಹೇಳಿದೆ. ಸುರೇಶ್ ಅವರು ಈ ಹಿಂದೆ ಕೆಲಸ ಮಾಡಿದ ಗ್ರಾಮ ಕಚೇರಿಗಳಲ್ಲೂ ಇದೇ ರೀತಿ ಅಕ್ರಮ ಎಸಗಿರುವುದು ವಿಜಿಲೆನ್ಸ್ ಪತ್ತೆ ಹಚ್ಚಿದೆ.