ಪಣಜಿ: ಕೇರಳದ ಪ್ರವಾಸಿಗರ ಮೇಲೆ ಪಾನಮತ್ತ ಜೋಡಿಯೊಂದು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಗೋವಾದ ಪೊರ್ವೊರಿಮ್ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಭಾನುವಾರ ರಾತ್ರಿ 11 ಗಂಟೆಗೆ ಪೊರ್ವೊರಿಮ್ನಲ್ಲಿ ನಡೆದಿದೆ.
ಇದೇ ಸಮಯದಲ್ಲಿ ಅಲ್ಲಿದ್ದ ಕೇರಳಿಗರ ಗುಂಪೊಂದು, ಸುಮ್ಮನೇ ನೋಡುತ್ತಾ ನಿಂತುಕೊಳ್ಳುವುದು ಬೇಡ, ಹೇಗಾದರೂ ಮಾಡಿ ಜಗಳ ಬಿಡಿಸಬೇಕು ಅಂದುಕೊಂಡು ಮಧ್ಯ ಪ್ರವೇಶ ಮಾಡುತ್ತಾರೆ. ಕ್ಯಾಷಿಯರ್ ಮೇಲೆ ಹಲ್ಲೆ ಮಾಡುವುದು ತಡೆಯಲು ಯತ್ನಿಸುತ್ತಾರೆ. ಆದರೆ, ಮದ್ಯದ ಅಮಲಿನಲ್ಲಿದ್ದ ಜೋಡಿ ಕೇರಳಿಗರ ಮೇಲೆಯೇ ಹಲ್ಲೆ ಮಾಡಲು ಯತ್ನಿಸುತ್ತಾರೆ. ಅದರಲ್ಲೂ ಯುವತಿಯೇ ಹೆಚ್ಚಾಗಿ ಕೂಗಾಡಿ, ಮನಬಂದಂತೆ ನಿಂದಿಸಿ, ಹಲ್ಲೆ ಮಾಡುತ್ತಾಳೆ.
ರೆಸ್ಟೋರೆಂಟ್ ಸಿಬ್ಬಂದಿ ಮೇಲೆಯೂ ಆ ಜೋಡಿ ಮನಬಂದಂತೆ ನಿಂದಿಸುತ್ತಾರೆ. ಕೊನೆಗೂ ಎರಡು ಗುಂಪಿನ ನಡುವೆ ಒಂದು ದೊಡ್ಡ ಜಗಳವೇ ಶುರುವಾಗುತ್ತದೆ. ಇದೀಗ ಕೇರಳದ ಶ್ಯಾಮ್ ಕೃಷ್ಣ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ವಿವರವಾಗಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಗೋವಾದ ಎಸ್ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಗಲಾಟೆಯ ನಂತರವೂ ಮದ್ಯದ ಅಮಲಿನಲ್ಲಿದ್ದ ಜೋಡಿ, ಶ್ಯಾಮ್ ಕೃಷ್ಣ ಮತ್ತು ಅವರ ಸ್ನೇಹಿತರಿಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ. ಇದು ನನ್ನ ಗೋವಾ ಇಲ್ಲಿಂದ ತೊಲಗಿ ಎಂದು ಯುವತಿ ಕೂಗಾಡಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾನಮತ್ತ ಜೋಡಿಯ ವರ್ತನೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.