ಮುಂಬೈ: ಮುಂಬೈ ಮತ್ತು ಪುಣೆಯಲ್ಲಿ ಸೆಪ್ಟೆಂಬರ್ 19ರಿಂದ 28ರವರೆಗೆ ವಿಜೃಂಭಣೆಯಿಂದ ಗಣೇಶೋತ್ಸವಗಳು ಜರುಗಲಿದ್ದು, ಪ್ರಸಿದ್ಧ ಗಣೇಶ ಮಂಡಳಗಳು ಆಯೋಜಿಸುವ ಉತ್ಸವಗಳ ವೀಕ್ಷಣೆಗೆ ಅನುಕೂಲ ಕಲ್ಪಿಸಲು ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ನಿರ್ದೇಶನಾಲಯ ಪ್ಯಾಕೇಜ್ ಟೂರ್ ಆಯೋಜಿಸಿದೆ.

ಈ ಪ್ರವಾಸಿ ಕಾರ್ಯಕ್ರಮವನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯನ್ನು ರಾಜ್ಯದ 'ಟೂರಿಸಂ ಗೈಡ್ ಅಸೋಸಿಯೇಷನ್'ಗೆ ಸರ್ಕಾರ ವಹಿಸಿದೆ.
'ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇತಿಹಾಸ, ಸಂಸ್ಕೃತಿ, ಆಹಾರ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳಲು ಪ್ರವಾಸಿಗರಿಗೆ ನೆರವಾಗುತ್ತದೆ' ಎಂದು ಟೂರಿಸಂ ಗೈಡ್ ಅಸೋಸಿಯೇಷನ್ ಅಧ್ಯಕ್ಷ ಫರ್ಹಾನ್ ಶೇಖ್ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಮತ್ತು ಪುಣೆಯಲ್ಲಿ ತಲಾ 6ರಂತೆ ಒಟ್ಟು 12 ಪ್ರಸಿದ್ಧ ಮಂಡಳಗಳು ಆಯೋಜಿಸುವ ಉತ್ಸವಗಳ ವೀಕ್ಷಣೆಗೆ ಈ ಪ್ಯಾಕೇಜ್ ಟೂರ್‌ನಲ್ಲಿ ಅವಕಾಶ ದೊರೆಯಲಿದೆ.
'ನಿತ್ಯ ಎರಡು ಬ್ಯಾಚ್‌ಗಳಂತೆ ಪ್ರವಾಸ ಕಾರ್ಯ ಜರುಗಲಿದ್ದು, ಪ್ರತಿ ಬ್ಯಾಚ್‌ನಲ್ಲಿ ಗರಿಷ್ಠ 20 ಪ್ರವಾಸಿಗಳು ಇರುತ್ತಾರೆ. ಭಾರತೀಯ ಪ್ರವಾಸಿಗಳಿಗೆ ತಲಾ ₹ 300 ಹಾಗೂ ವಿದೇಶಿ ಪ್ರವಾಸಿಗರಿಗೆ ₹ 700 ಶುಲ್ಕ ನಿಗದಿಪಡಿಸಲಾಗಿದೆ. ಪ್ರವಾಸಕ್ಕೆಂದು ಎ.ಸಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ, ಪ್ರತಿ ಬಸ್‌ನಲ್ಲೂ ಪ್ರವಾಸಿ ಮಾರ್ಗದರ್ಶಕರು ಇರುತ್ತಾರೆ' ಎಂದು ಶೇಖ್ ಹೇಳಿದ್ದಾರೆ.
ಪ್ರವಾಸಿ ಕಾರ್ಯಕ್ರಮದ ಸಂಘಟಕರು, ಆನ್‌ಲೈನ್ ವೇದಿಕೆಯಾದ 'ಬುಕ್‌ಮೈಶೋ' ಜತೆಗೂ ಒಪ್ಪಂದ ಮಾಡಿಕೊಂಡಿದ್ದಾರೆ.