ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ರಾಜಕಾರಣದಿಂದ ಮಣಿಪುರದಲ್ಲಿ 'ಭಾರತ ಮಾತೆ'ಯ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದನ್ನು ಟೀಕಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ. ಆದರೆ ನಮ್ಮ ಪ್ರಧಾನಿ ಇದುವರೆಗೆ ಅಲ್ಲಿಗೆ ಹೋಗಿಲ್ಲ. ಅವರು ಮಣಿಪುರವನ್ನು ದೇಶದ ಭಾಗವೆಂದು ಪರಿಗಣಿಸಿಲ್ಲ. ನಾನು ಮಣಿಪುರ ಎಂಬ ಪದವನ್ನು ಬಳಕೆ ಮಾಡಿದ್ದೇನೆ. ಆದರೆ ನಿಜಾಂಶವೆಂದರೆ ಮಣಿಪುರ ಅಸ್ತಿತ್ವದಲ್ಲಿಲ್ಲ. ಬಿಜೆಪಿ ಸರ್ಕಾರ ಮಣಿಪುರವನ್ನು ಇಬ್ಭಾಗ ಮಾಡಿದೆ. ಮಣಿಪುರವನ್ನು ಒಡೆಯಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಣಿಪುರದಲ್ಲಿ ಹಿಂದೂಸ್ತಾನದ ಕೊಲೆಯಾಗಿದೆ. ಅವರ ರಾಜಕೀಯ ಮಣಿಪುರವನ್ನು ಮಾತ್ರವಲ್ಲ ಹಿಂದೂಸ್ತಾನವನ್ನು ಕೊಲೆ ಮಾಡಲಾಗಿದೆ. ಮಣಿಪುರದಲ್ಲಿ ಜನರನ್ನು ಕೊಂದಿರುವ ನೀವು ಭಾರತ ಮಾತೆಯನ್ನೂ ಕೊಂದಿದ್ದೀರಿ. ನೀವು ದೇಶಭಕ್ತರಲ್ಲ, ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಧ್ವನಿಯನ್ನು ಮಟ್ಟ ಹಾಕಲಾಗಿದೆ. ಮಣಿಪುರದಲ್ಲಿ ಭಾರತ ಮಾತೆಯ ಕೊಲೆಯಾಗಿದೆ. ನನ್ನ ತಾಯಿ (ಸೋನಿಯಾ ಗಾಂಧಿ) ಇಲ್ಲಿ ಕುಳಿತಿದ್ದಾರೆ. ಆದರೆ ಮತ್ತೊಬ್ಬ ತಾಯಿಯಾದ ಭಾರತ ಮಾತೆಯನ್ನು ಮಣಿಪುರದಲ್ಲಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮಣಿಪುರಕ್ಕೆ ಬೆಂಕಿ ಹಚ್ಚಿದ ನೀವು ಹರಿಯಾಣದಲ್ಲೂ ಅದನ್ನೇ ಪ್ರಯತ್ನಿಸುತ್ತಿದ್ದೀರಿ ಎಂದು ಇತ್ತೀಚಿನ ಗುರುಗ್ರಾಮ ಮತ್ತು ನೂಹ್ ಗಲಭೆಗಳನ್ನು ಉಲ್ಲೇಖಿಸಿ ಅವರು ಹೇಳಿದರು.