ಮಂಜೇಶ್ವರ : ಕೇರಳದ ಪ್ರಾಂತೀಯ ಹಬ್ಬವಾದ ಓಣಂ ಹಬ್ಬದ ಆಚರಣೆಯನ್ನು ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರದಿಂದ ನಡೆಸಲಾಯಿತು.
ಆ ಪ್ರಯುಕ್ತ ಆಕರ್ಷಕ ಹೂವಿನ ರಂಗೋಲಿಯನ್ನು ರಚಿಸಲಾಯಿತು. ಶಾಲಾ ಮಕ್ಕಳು ವಿವಿಧ ರೀತಿಯ ಹೂವಿನ ರಂಗೋಲಿಯನ್ನು ರಚಿಸುವ ಮೂಲಕ ಸಂಭ್ರಮಿಸಿದರು. ಓಣಂ ವಿಶೇಷ ಮಹಾಬಲಿಯ ವೇಷವನ್ನು ಹಾಕಿದ ಶಾಲಾ ನಾಯಕ ಚಾರ್ವಿನ್ ಆಳ್ವ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸಿದನು. ಬಳಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ ಪಿ ಓಣಂ ಹಬ್ಬದ ಐತಿಹ್ಯವನ್ನು ಮಕ್ಕಳಿಗೆ ತಿಳಿಸಿದರು.
ಓಣಂ ಹಬ್ಬದ ಸಲುವಾಗಿ ವಿಶೇಷ ಓಣಂ ಊಟವನ್ನು ವಿತರಿಸಲಾಯಿತು. ಬಳಿಕ ಶಾಲಾ ಮಕ್ಕಳಿಗೆ ಮನರಂಜನೆಯ ಆಟ ಏರ್ಪಡಿಸಲಾಯಿತು. ಶಾಲಾ ಸಿಬ್ಬಂದಿ ವರ್ಗ ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.