HEALTH TIPS

ದೆಹಲಿ ಸೇವಾ ಕಾಯ್ದೆಯ ಅಗತ್ಯದ ಕುರಿತ ಪ್ರಚಾರ ವಾಹನಕ್ಕೆ ಚಾಲನೆ

              ವದೆಹಲಿ: ದೆಹಲಿ ಸೇವಾ ಕಾಯ್ದೆಯ ಅಗತ್ಯದ ಕುರಿತು ಜನರಿಗೆ ಮನದಟ್ಟು ಮಾಡಲು ರಾಷ್ಟ್ರ ರಾಜಧಾನಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ತೆರಳಲಿರುವ ಪ್ರಚಾರ ವಾಹನಗಳಿಗೆ ಮಂಗಳವಾರ ಇಲ್ಲಿ ಚಾಲನೆ ನೀಡಲಾಯಿತು.

              'ಏಳು ಪ್ರಚಾರ ವಾಹನಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಕಾಯ್ದೆಯನ್ನು ಯಾಕೆ ತರಲಾಗಿದೆ ಎಂಬುದರ ಕುರಿತು ವಿಡಿಯೊ ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸಲಿದೆ' ಎಂದು ಬಿಜೆಪಿ ದೆಹಲಿ ಘಟಕ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಹೇಳಿದ್ದಾರೆ.

             'ಪಟ್ಟಭದ್ರ ಹಿತಾಸಕ್ತಿ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಅರವಿಂದ ಕೇಜ್ರಿವಾಲ್‌ ಸರ್ಕಾರದ ಹಿಡಿತದಿಂದ ದೆಹಲಿಯನ್ನು ರಕ್ಷಿಸಲು ಈ ಕಾಯ್ದೆ ಅಗತ್ಯವಾಗಿದೆ' ಎಂದು ಅವರು ತಿಳಿಸಿದ್ದಾರೆ.

                ಸಂಸತ್‌ನ ಒಳಗೆ ಮತ್ತು ಹೊರಗಡೆ ಈ ಮಸೂದೆಯ ಬೆಂಬಲಿಸಿ ಮಾತನಾಡಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ಮುಖಂಡರ ವಿಡಿಯೊಗಳನ್ನು ವಾಹನಗಳಿಗೆ ಅಳವಡಿಸಿರುವ ಪರದೆಯಲ್ಲಿ ಪ್ರದರ್ಶಿಸಲಾಗುವುದು ಎಂದಿದ್ದಾರೆ.

                 ದೆಹಲಿಯ ಬಿಜೆಪಿ ಸಂಸದರಾದ ಹರ್ಷವರ್ಧನ್‌, ರಮೇಶ್‌ ಬಿಧುರಿ ಮತ್ತು ಪರ್ವೇಶ್‌ ವರ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

               ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆಯು ಈ ತಿಂಗಳ ಆರಂಭದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿತ್ತು. ಬಳಿಕ ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries