ಕಾಸರಗೋಡು: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ಕಾನೂನು ತಿದ್ದುಪಡಿ ತರಲಾಗುವುದು ಎಂದು ಸ್ಥಳೀಯಾಡಳಿತ, ಅಬಕಾರಿ ಖಾತೆ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದರೆ. ಅವರು ಚೆಮ್ನಾನಾಡು ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಹಸಿರು ಕ್ರಿಯಾ ಸೇನೆಯು ಕೇರಳದ ಶುಚಿತ್ವ ಸೇನೆಯಾಗಿದೆ. ಕಸದ ತೊಟ್ಟಿಗಳು ಹೆಚ್ಚಾದಂತೆ ಸಾಂಕ್ರಾಮಿಕ ರೋಗಗಳ ಜತೆಗೆ ಬೀದಿ ನಾಯಿಗಳೂ ಹೆಚ್ಚಾಗುತ್ತವೆ. 2024ರ ಮಾರ್ಚ್ 30 ರೊಳಗೆ ಕೇರಳವನ್ನು ತ್ಯಾಜ್ಯ ಮುಕ್ತ ಪ್ರದೇಶವನ್ನಾಗಿ ಮಾಡಲು ಎಲ್ಲರೂ ಪಣತೊಡಬೇಕಾದ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಹಸಿರು ಕ್ರಿಯಾ ಸೇನೆಯ ರಶೀದಿ ಇದ್ದರೆ ಮಾತ್ರ ಪಂಚಾಯಿತಿಯ ಸೇವೆಗಳನ್ನು ಒದಗಿಸಲಾಗುವುದು ಎಂಬ ತೀರ್ಮಾನ ಕೈಗೊಂಡಿರುವ ಚೆಮ್ನಾಡು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ, ಉದುಮ ಗ್ರಾ.ಪಂ.ಅಧ್ಯಕ್ಷೆ ಎನ್.ಲಕ್ಷ್ಮಿ, ಚೆಮ್ನಾಡು ಗ್ರಾ.ಪಂ.ಉಪಾಧ್ಯಕ್ಷ ಮನ್ಸೂರ್ ಕುರಿಕಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಯಿಷಾ ಅಬೂಬಕ್ಕರ್, ಶಂಸುದ್ದೀನ್ ತೆಕ್ಕಿಲ್, ರಮಾ ಗಂಗಾಧರನ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಹನೀಫ ಪಾರ, ಚೆಮ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಇ.ಮನೋಜ್ ಕುಮಾರ್, ಅಹಮದ್ ಕಲ್ಲಟ್ರ, ರಾಜನ್ ಕೆ.ಪೆÇಯಿನಾಚಿ, ಸುಜಾತಾ ರಾಮಕೃಷ್ಣನ್, ಕೆ.ಕೃಷ್ಣನ್, ಮೈಮೂನ ಅಬ್ದುಲ್ ರೆಹಮಾನ್ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎನ್.ಬಾಲಚಂದ್ರನ್, ಅಬ್ದುಲ್ ಖಾದರ್ ಕಳನಾಡ್, ಟಿ.ನಾರಾಯಣನ್,ಪುರುಷೋತ್ತಮನ್, ದೇಳಿ ಮೊಹಮ್ಮದ್, ತುಲಸೀಧರನ್ ಬಳಾನಮ್ ಮೊದಲಾದವರು ಉಪಸ್ಥಿತರಿದ್ದರು. ಚೆಮ್ನಾಡ್ ಗ್ರಾಪಂ ಅಧ್ಯಕ್ಷೆ ಸುಫೈಜ ಅಬೂಬಕ್ಕರ್ ಸ್ವಾಗತಿಸಿದರು. ಕರ್ಯದರ್ಶಿ ಎಮ್.ಸುರೇಂದ್ರನ್ ವಂದಿಸಿದರು.