ಬದಿಯಡ್ಕ: ಅಡೂರು ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆಯ ಬಹುಮಾನ ವಿತರಣೆಯು ನೀರ್ಚಾಲು ಸಮೀಪದ ಕುಂಟಿಕಾನ ಎಎಸ್‍ಬಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಗ್ರಾಮ ಪರ್ಯಟನೆ ಸರಣಿಯ 6ನೇ ಕಾರ್ಯಕ್ರಮದಲ್ಲಿ ಬಹುಮಾ£ಗಳÀನ್ನು ವಿಜೇತರಿಗೆ ವಿತರಿಸಲಾಯಿತು. ಈ ಸ್ಪರ್ಧೆಯಲ್ಲಿ ಮಂಗಳೂರಿನ ಬಿ ಸತ್ಯವತಿ ಭಟ್ ಕೊಳಚÀಪ್ಪು (ಪ್ರಥಮ), ಕಾಸರಗೋಡಿನ ಸ್ನೇಹಲತಾ ದಿವಾಕರ್ ಕುಂಬ್ಳೆ (ದ್ವಿತೀಯ) ಹಾಗೂ ಮಂಗಳೂರಿನ ರಾಜೇಂದ್ರ ಕೇದಿಗೆ (ತೃತೀಯ) ಬಹುಮಾನ ಗಳಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಭಾಸ್ಕರ ಅಡ್ವಳ, ಬದಿಯಡ್ಕ ನವಜೀವನ ಪ್ರೌಢಶಾಲೆಯ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ, ನಿವೃತ್ತ ಶಿಕ್ಷಕ ದಿನೇಶ್ ಬೊಳುಂಬು, ಹಿರಿಯ ಸಂಘಟಕ ಕುಂಟಿಕಾನ ವೆಂಕಟೇಶ್ವರ ಭಟ್, ಕುಂಟಿಕಾನ ಶಾಲಾ ಪ್ರಬಂಧಕ ಶಂಕರನಾರಾಯಣ ಶರ್ಮ, ಕುಂಟಿಕಾನ ಶಾಲಾ ಮುಖ್ಯ ಶಿಕ್ಷಕ ವೆಂಕಟರಾಜ ವಿ, ಶಿಕ್ಷಕರಾದ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ರಾಜೇಶ್ ಎಸ್ ಉಬ್ರಂಗಳ ಮೊದಲಾದವರು ಭಾಗವಹಿಸಿದ್ದರು.