ಆಲಪ್ಪುಳ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮನೆ ಕಳ್ಳತನ ನಡೆದಿದೆ. ಅಲಪ್ಪುಳದಲ್ಲಿ ಅಧಿಕೃತ ಕಚೇರಿಯಾಗಿ ಕಾರ್ಯನಿರ್ವಹಿಸುವ ಮನೆಯಲ್ಲಿ ಮೊನ್ನೆ ರಾತ್ರಿ ದರೋಡೆ ನಡೆದಿದೆ.
ಲೆಟರ್‍ಪ್ಯಾಡ್, ಚೆಕ್‍ಲೀಫ್‍ಗಳು, ವಾಚ್‍ಗಳು ಮತ್ತು ಫೈಲ್‍ಗಳನ್ನು ಕಳವು ಮಾಡಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಘಟನೆ ನಡೆದ ದಿನ ರಾತ್ರಿ 11.30ರವರೆಗೆ ಸಿಬ್ಬಂದಿ ಅಜ್ಮಲ್ ಹಾಗೂ ಯೂತ್ ಕಾಂಗ್ರೆಸ್ ಅಂಬಲಪುಳ ಬ್ಲಾಕ್ ಅಧ್ಯಕ್ಷ ನೂರುದ್ದೀನ್ ಕೋಯಾ ಮನೆಯಲ್ಲಿದ್ದರು. ಅವರು ಹೋದ ನಂತರ ಕಳ್ಳತನ ನಡೆದಿದೆ. ನಂತರ ಮರುದಿನ ಬೆಳಗ್ಗೆ ಹನ್ನೊಂದಕ್ಕೆ ಅಜ್ಮಲ್ ಬಂದಾಗ ಕಳ್ಳತನವಾಗಿರುವ ವಿಷಯ ತಿಳಿಯಿತು.
ಮನೆಯ ಹಿಂಬದಿಯ ಕಿಟಕಿಯ ಸರಳುಗಳನ್ನು ಸರಿಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಕಚೇರಿ ಹಾಗೂ ಮಲಗುವ ಕೋಣೆಯಲ್ಲಿದ್ದ ಕಪಾಟಿನಲ್ಲಿದ್ದ ಕಡತಗಳು ಅಸ್ತವ್ಯಸ್ತಗೊಂಡಿದ್ದವು. ಮೊದಲಿಗೆ ಲ್ಯಾಪ್ ಟಾಪ್, ಮೊಬೈಲ್ ಕಳ್ಳತನವಾಗಿದೆ ಎಂದು ಉದ್ಯೋಗಿಗಳು ಭಾವಿಸಿದ್ದು, ಪರಿಶೀಲನೆ ವೇಳೆ ನಾಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳದವರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ನಿಫರ್ ಡಾಗ್ ಕಲರಕೋಡ್ ಕಡೆಗೆ ಓಡಿತು. ವೇಣುಗೋಪಾಲ್ ಅವರ ಅಧಿಕೃತ ನಿವಾಸವು ಆಲಪ್ಪುಳದ ಕೈತವನ ವಾರ್ಡ್‍ನಲ್ಲಿದೆ. ಪೆÇಲೀಸರ ಪ್ರಕಾರ ಇತ್ತೀಚೆಗೆ ಸಮೀಪದ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ. ಆದರೆ ಎರಡೂ ಘಟನೆಗಳ ಆರೋಪಿಗಳನ್ನು ಬಂಧಿಸಲು ಪೋಲೀಸರಿಗೆ ಸಾಧ್ಯವಾಗಿಲ್ಲ.