ನುಹ್: ರೋಲ್ಸ್-ರಾಯ್ಸ್- ತೈಲ ಟ್ಯಾಂಕರ್ ಅಪಘಾತ ಪ್ರಕರಣದಲ್ಲಿ ಕುಬೇರ್ ಸಮೂಹದ ನಿರ್ದೇಶಕ ವಿಕಾಸ್ ಮಾಲು ಅವರನ್ನು ತನಿಖೆಗೆ ಹಾಜರಾಗುವಂತೆ ಹರ್ಯಾಣ ಪೊಲೀಸರು ಸೂಚಿಸಿದ್ದಾರೆ.
ಈ ಅಪಘಾತದಲ್ಲಿ ವಿಕಾಸ್ ಅವರಿಗೆ ಗಾಯಗಳಾಗಿತ್ತು ಹಾಗೂ ಇಬ್ಬರು ಸಾವನ್ನಪ್ಪಿದ್ದರು. ಮಾಲು ಸೇರಿದಂತೆ ಕಾರಿನಲ್ಲಿದ್ದ ಮೂವರಿಗೆ ತೀವ್ರವಾಗಿ ಗಾಯಗಳಾಗಿತ್ತು. ಹರ್ಯಾಣದ ಉಮ್ರಿ ಗ್ರಾಮದ ಬಳಿ ದೆಹಲಿ-ಮುಂಬೈ-ಬರೋಡಾ ಎಕ್ಸ್ ಪ್ರೆಸ್ ವೇ ನಲ್ಲಿ ಮಂಗಳವಾರ (ಆ.22) ಮಧ್ಯಾಹ್ನ ನಡೆದಿತ್ತು.
ಪ್ರಾಥಮಿಕ ವರದಿಗಳ ಪ್ರಕಾರ ತೈಲ ಟ್ಯಾಂಕರ್ ರಸ್ತೆಯ ತಪ್ಪು ಬದಿಯಲ್ಲಿ ಬರುತ್ತಿದ್ದದ್ದು ಈ ಅಪಘಾತಕ್ಕೆ ಕಾರಣವಾಗಿದೆ. ಈ ರೀತಿ ತಪ್ಪು ದಾರಿಯಲ್ಲಿ ಬರುತ್ತಿದ್ದ ಟ್ಯಾಂಕರ್ ರೋಸ್-ರಾಯ್ಸ್ ಕಾರಿಗೆ ಢಿಕ್ಕಿ ಹೊಡೆದಿದೆ. ಆದರೆ, ಪೊಲೀಸ್ ಠಾಣೆಯಲ್ಲಿ ಅಪಘಾತದ ದಿನ ದಾಖಲಾದ ಎಫ್‌ಐಆರ್ ಪ್ರಕಾರ, ಕಾರು ಹಿಂದಿನಿಂದ ಬಂದು ತೈಲ ಟ್ಯಾಂಕರ್‌ನ ಮುಂಭಾಗದ ಟೈರ್‌ಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ, ಟ್ಯಾಂಕರ್ ಪಲ್ಟಿಯಾಗಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಮಾಲು ಅವರನ್ನು ಅಪಘಾತದ ನಂತರ ವಿಕಾಸ್ ಅವರನ್ನು ಗುರುಗ್ರಾಮದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.