ಕುಂಬಳೆ: ಕಳತ್ತೂರು ಶ್ರೀಮಹಾದೇವ ಭಜನಾ ಸಂಘದ ಆಶ್ರಯದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ಕಾವ್ಯ ವಾಚನ ಸಪ್ತಾಹ ಆ.7 ರಿಂದ 13ರ ವರೆಗೆ ಮಹಾದೇವ ಸಭಾ ಭವನದಲ್ಲಿ ಸಂಜೆ 5.30 ರಿಂದ 7ರ ವರೆಗೆ ಆಯೋಜಿಸಲಾಗಿದೆ.
ಸಮಾರಂಭದ ಅಂಗವಾಗಿ ಆ.7 ರಂದು ಚೂಡಾಮಣಿ ಆಖ್ಯಾಯಿಕೆಯಲ್ಲಿ ಕಾರಿಂಜ ರಾಮಕೃಷ್ಣ ಶೆಟ್ಟಿ ವಾಚನ ಹಾಗೂ ನರಹರಿ ಪಾಲೆಚ್ಚಾರು ಪ್ರವಚನ ನಡೆಸುವರು. 8 ರಂದು ಕಾರಿಂಜ ರಾಮಕೃಷ್ಣ ಶೆಟ್ಟಿ ವಾಚನ ಹಾಗೂ ನರಹರಿ ಪಾಲೆಚ್ಚಾರು ಅವರ ಪ್ರವಚನದಲ್ಲಿ ಲಂಕಾ ದಹನ ಪ್ರಸ್ತುತಿಗೊಳ್ಲಲಿದೆ. 9 ರಮದು ವಿಭೀಷಣ ನೀತಿ ಕಥಾಭಾಗದ ವಾಚನವನ್ನು ವಿನೋದ ಪ್ರಸಾದ ರೈ ಕಾರಿಂಜ ಹಾಗೂ ಪ್ರವಚನವನ್ನು ಉಷಾ ಶಿವರಾಮ ಭಟ್ ಕಾರಿಂಜ ನಡೆಸುವರು. 10 ರಂದು ಅಂಗದ ಸಂಧಾನ ಕಥಾಭಾಗದ ವಾಚನವನ್ನು ಲತಾ ಹರೀಶ್ ನಿರ್ವಹಿಸುವರು. ಶಿವರಾಮ ಭಂಡಾರಿ ಕಾರಿಂಜ ವ್ಯಾಖ್ಯಾನ ನೀಡುವರು. 11 ರಂದು ಮಾಯಾ ಶಿರಸ್ಸು ಭಾಗದ ವಾಚನವನ್ನು ಶಿವಪ್ರಸಾದ್ ಆಚಾರ್ಯ ಶ್ರೀನಗರ ನಿರ್ವಹಿಸುವರು. ಕುಂಚಿನಡ್ಕ ನಾರಾಯಣ ಭಟ್ ಪ್ರವಚನ ನೀಡುವರು. 12 ರಂದು ಅತಿಕಾಯ ಮೋಕ್ಷ ಭಾಗದಲ್ಲಿ ಶಿವರಾಮ ಭಂಡಾರಿ ಕಾರಿಂಜ ಪ್ರವಚನ ನೀಡುವರು. 13 ರಂದು ಇಂದ್ರಜಿತು ಕಾಳಗ-ರಾವಣ ವಧೆ ಕಾವ್ಯ ಭಾಗದ ವಾಚನದಲ್ಲಿ ಕಾರಿಂಜ ಹಳೆಮನೆ ರಾಮ ಭಟ್, ಕಾರಿಂಜ ರಾಮಕೃಷ್ಣ ಶೆಟ್ಟಿ ನಿರ್ವಹಿಸಿದರೆ ನರಹರಿ ಪಾಲೆಚ್ಚಾರು ಪ್ರವಚನ ನೀಡುವರು.