ನವದೆಹಲಿ: ಹೆಮ್ಮೆಯ ಯೋಧರ ಸ್ಮರಣಾರ್ಥ ನಿರ್ಮಿಸಿರುವ 'ರಾಷ್ಟ್ರೀಯ ಯುದ್ಧ ಸ್ಮಾರಕ' ಕುರಿತ ಅಧ್ಯಾಯವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಏಳನೇ ತರಗತಿ ಪಠ್ಯಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ಶಾಲಾ ಮಕ್ಕಳಲ್ಲಿ ಧೈರ್ಯ, ತ್ಯಾಗ, ಕರ್ತವ್ಯ ನಿಷ್ಠೆ ಮತ್ತು ದೇಶಭಕ್ತಿಯ ಮೌಲ್ಯವನ್ನು ಮೈಗೂಡಿಸಲು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ರಕ್ಷಣೆ ಮತ್ತು ಶಿಕ್ಷಣ ಸಚಿವಾಲಯಗಳು ಜಂಟಿಯಾಗಿ ಈ ಕ್ರಮ ಕೈಗೊಂಡಿವೆ ಎಂದು ತಿಳಿಸಿದೆ.
'ಅಧ್ಯಾಯದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದ ಇತಿಹಾಸ, ಮಹತ್ವ ಮತ್ತು ಪರಿಕಲ್ಪನೆ ಮತ್ತು ಸ್ವಾತಂತ್ರ್ಯಾನಂತರ ಹೆಮ್ಮೆಯ ಸೈನಿಕರ ತ್ಯಾಗ ಬಲಿದಾನದ ಕುರಿತ ಮಾಹಿತಿ ಇದೆ' ಎಂದು ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕವನ್ನು 2019ರ ಫೆಬ್ರುವರಿ 15ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.