ಕಾಸರಗೋಡು: ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಭಾರತದ ಅಖಂಡತೆಯನ್ನು ಬಲಪಡಿಸಿರುವುದಾಗಿ ಸ್ಥಳೀಯಾಡಳಿತ, ಅಬಕಾರಿ ಖಾತೆ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ. ಅವರು ಕಾಸರಗೋಡು ವಿದ್ಯಾನಗರ ನಗರಸಭಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ ಮಾತನಾಡಿದರು.
ನಮ್ಮೊಂದಿಗೆ ಸ್ವಾತಂತ್ರ್ಯ ಪಡೆದ ಕೆಲವು ದೇಶಗಳು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಅಭಿವೃದ್ಧಿಯ ಪಥದಲ್ಲಿದ್ದರೆ, ಇನ್ನು ಕೆಲವು ದೇಶಗಳು ವಿಭಜನೆಯ ಹಾದಿಯನ್ನೂ ಕಂಡಿದೆ. ಭಾರತ ಕಳೆದ 76ವರ್ಷಗಳಿಂದ ಕಾಯ್ದುಕೊಂಡು ಬಂದಿರುವ ಜಾತ್ಯತೀತ ವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ತಿಳಿಸಿದರು.
ವಿದ್ಯಾನಗರ ಠಾಣೆ ಪೆÇಲೀಸ್ ಇನ್ಸ್‍ಪೆಕ್ಟರ್ ಪಿ. ಪ್ರಮೋದ್ ಪರೇಡ್ ಕಮಾಂಡರ್ ಹಾಗೂ ವೆಳ್ಳರಿಕುಂಡ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಹರಿಕೃಷ್ಣನ್ ಸಹಾಯಕ ಕಮಾಂಡಿಂಗ್ ಅಧಿಕಾರಿಯಾಗಿದ್ದರು.
ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್, ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್, ಅಬಕಾರಿ ಮತ್ತು ವಿದ್ಯಾರ್ಥಿ ಪೆÇಲೀಸ್‍ನ ನಾಲ್ಕು ಪ್ಲಾಟೂನ್‍ಗಳು, ಸರ್ಕಾರಿ ಕಾಲೇಜು ಕಾಸರಗೋಡು, ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಪಡನ್ನಕ್ಕಾಡ್, ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್, ಇಕ್ಬಾಲ್ ಎಚ್‍ಎಸ್‍ಎಸ್ ಕಾಞಂಗಾಡ್, ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಎನ್‍ಸಿಸಿ ನೇವಲ್ ವಿಂಗ್, ಚೆಮ್ನಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಏರ್ ವಿಂಗ್, ದಕ್ಕೀರತ್ ಆಂಗ್ಲ ಮಾಧ್ಯಮ ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ ಮತ್ತು ಗೈಡ್, ಜವಾಹರ್ ನವೋದಯ ವಿದ್ಯಾಲಯ ಪೆರಿಯದ ಬ್ಯಾಂಡ್ ಸೆಟ್, ಜೈ ಮಾತಾ ಆಂಗ್ಲ ಮಾಧ್ಯಮ ಶಾಲೆ ಉಳಿಯತ್ತಡ್ಕ ಹಾಗೂ ಜಿಲ್ಲಾ ಯುವಜನ ಕಲ್ಯಾಣ ಮಂಡಳಿ ಕಾಸರಗೋಡು ಕೇರಳ ತಂಡ ಮೆರವಣಿಗೆಯಲ್ಲಿ ಭಾಗವಹಿಸಿತ್ತು.
ಸಂಗೀತಗಾರರ ಕಲ್ಯಾಣ ಅಸೋಸಿಯೇಷನ್ ವತಿಯಿಂದ ದೇಶಭಕ್ತಿ ಗೀತೆ, ಕೇರಳ ಪೆÇಲೀಸ್ ಒಂದನೇ ತಂಡದಿಂದ ದೇಶಭಕ್ತಿ ಗೀತೆ, ನವೋದಯ ನಗರ ಸೇವ್ ಕ್ಲಬ್‍ನಿಂದ ಕೈಮುಟ್ಟು ಪ್ರದರ್ಶನ, ಪೆರಿಯ ಜವಾಹರ್ ನವೋದಯ ವಿದ್ಯಾಲಯದಿಂದ ದೇಶಭಕ್ತಿ ಗೀತೆ, ಕುಂಬಳೆ ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯಿಂದ ಸಮೂಹ ನೃತ್ಯ, ಕೇರಳ ಪೆÇಲೀಸ್ ಎರಡನೇ ತಂಡದಿಂದ ದೇಶಭಕ್ತಿ ಗೀತೆ, ಪರವನಡ್ಕ ಸರ್ಕಾರಿ ಮಾದರಿ ವಸತಿ ಶಾಲೆಯ ಜಾನಪದ ಗೀತೆ, ದೇಶಭಕ್ತಿಗೀತೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರರು, ಜಿಲ್ಲಾ ಪ್ರತಿನಿಧಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.