ಮಂಜೇಶ್ವರ: ಮಂಜೇಶ್ವರ ತಾಲೂಕಿನ ಅಂಗಡಿ-ಮುಗ್ಗಟ್ಟುಗಳಿಗೆ ಡೆಪ್ಯುಟಿ ಕಲೆಕ್ಟರ್ (ಆರ್‍ಆರ್) ಸಿರೋಶ್ ಪಿ.ಜಾನ್ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ದಿನಸಿ ಅಂಗಡಿಗಳು, ಬೇಕರಿಗಳು, ಹಣ್ಣು-ತರಕಾರಿಗಳು, ಮೀನು, ಮಾಂಸದ ಅಂಗಡಿಗಳು ಮತ್ತು ಸ್ಟೇಷನರಿ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಯಿತು. ಬೆಲೆ ಪಟ್ಟಿಯನ್ನು ಸಾರ್ವಜನಿಕರ ಕಣ್ಣಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಮತ್ತು ಮಾಂಸದಂಗಡಿಗಳಲ್ಲಿ ದಿನಾಂಕ ಮತ್ತು ಮೊತ್ತವನ್ನು ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾ ಸರಬರಾಜು ಅಧಿಕಾರಿ ಎ.ಸಜಾದ್, ಮಂಜೇಶ್ವರ ತಾಲೂಕು ಸರಬರಾಜು ಅಧಿಕಾರಿ ಕೆ.ಪಿ.ಸಜಿಮೋನ್, ಪಡಿತರ ನಿರೀಕ್ಷಕರಾದ ಎನ್.ಸುರೇಶ್ ನಾಯ್ಕ್, ಪಿ.ಸುಧೀರ್, ಕಾನೂನು ಮಾಪನ ನಿರೀಕ್ಷಕ ಸಹಾಯಕ ರಾಬರ್ಟ್ ಪೇರಾ, ಜಿಲ್ಲಾ ಸರಬರಾಜು ಕಛೇರಿಯ ಮುಖ್ಯ ಗುಮಾಸ್ತ ವಿ.ಬಿ.ರಾಜೀವ, ಚಾಲಕರಾದ ಪಿ.ಬಿ.ಅನ್ವರ್, ನಳಿನಾಕ್ಷನ್ ಮತ್ತಿತರರು ಭಾಗವಹಿಸಿದ್ದರು.