HEALTH TIPS

ಬೂಕರ್‌ ಪ್ರಶಸ್ತಿ ಅಂತಿಮ ಸ್ಪರ್ಧೆಗೆ ಭಾರತ ಮೂಲದ ಲೇಖಕಿಯ ಕೃತಿ

                 ಲಂಡನ್‌ (PTI): ಭಾರತ ಮೂಲದ, ಲಂಡನ್‌ನ ಲೇಖಕಿ ಚೇತನಾ ಮಾರೂ ಅವರ ಪ್ರಥಮ ಕಾದಂಬರಿ 'ವೆಸ್ಟರ್ನ್ ಲೇನ್‌', 2023ನೇ ಸಾಲಿನ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.

               ಅಂತಿಮ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. 11 ವರ್ಷ ವಯಸ್ಸಿನ ಬಾಲಕಿ ಗೋಪಿ ಮತ್ತು ಕುಟುಂಬದ ಜೊತೆಗೆ ಆಕೆಯ ಕುಟುಂಬದ ಒಡನಾಟ, ಸಂಬಂಧ ಕಾದಂಬರಿಯ ವಸ್ತು.'ಬ್ರಿಟಿಷ್‌ ಗುಜರಾತಿ ಸಾಮಾಜಿಕ ಪರಿಸರದ ಹಿನ್ನೆಲೆಯ ಚಿತ್ರಣವುಳ್ಳ ಈ ಕಾದಂಬರಿಯಲ್ಲಿ ಭಾವನೆಗಳ ತಾಕಲಾಟದ ಅಭಿವ್ಯಕ್ತಿಗೆ ರೂಪಕವಾಗಿ ಸ್ಕ್ವಾಶ್‌ ಕ್ರೀಡೆಯು ಬಳಕೆಯಾಗಿದೆ' ಎಂದು ಬೂಕರ್‌ ಪ್ರಶಸ್ತಿಯ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಸ್ತು ಮತ್ತು ರೂಪಕವಾಗಿ ಸ್ಕ್ವಾಶ್ ಕ್ರೀಡೆಯನ್ನು ಕೌಶಲಯುಕ್ತವಾಗಿ ಬಳಸಲಾಗಿದೆ. ಕುಟುಂಬ ಸಂಬಂಧವನ್ನು ಪರಿಣಾಮಕಾರಿಯಾಗಿ ಕೃತಿ ಬಿಂಬಿಸಿದೆ ಎಂದು ಕೆನಡಾದ ಲೇಖಕ, ತೀರ್ಪುಗಾರ ಮಂಡಳಿಯಲ್ಲಿರುವ ಎಸಿ ಎಡುಗ್ಯಾನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

                ಅಕ್ಟೋಬರ್‌ 2022ರಿಂದ ಸೆಪ್ಟೆಂಬರ್ 2023ರವರೆಗೆ ಪ್ರಕಟವಾಗಿರುವ 163 ಕೃತಿಗಳು ಪ್ರಶಸ್ತಿಗೆ ಪ್ರವೇಶ ಪಡೆದಿದ್ದವು. ಈ ಪೈಕಿ 13 ಕೃತಿಗಳು ಪ್ರಶಸ್ತಿಯ ಅಂತಿಮ ಸ್ಪರ್ಧೆಯ ಪಟ್ಟಿಯಲ್ಲಿವೆ.

ಪ್ರಶಸ್ತಿ ವಿಜೇತ ಕೃತಿಯ ವಿವರವನ್ನು ನವೆಂಬರ್ 26ರಂದು ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಕಟಿಸಲಾಗುತ್ತದೆ. ಪ್ರಶಸ್ತಿಯು 'ಐರಿಸ್‌' ಫಲಕ, 50 ಸಾವಿರ ಪೌಂಡ್ ಸ್ಟರ್ಲಿಂಗ್ (ಸುಮಾರು ₹ 52.59 ಲಕ್ಷ) ಒಳಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries