ಕೊಯಿಲಾಂಡಿ: ಕಳೆದು ಒಂದು ವಾರದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಸುಟ್ಟುಕರಕಲಾಗಿರುವ ಘಟನೆ ಕೇರಳದ ಕೊಯಿಲಾಂಡಿ ಬಳಿ ನಡೆದಿದೆ.
ಅರಿಕ್ಕುಳಂ ಗ್ರಾಮದ ನಿವಾಸಿಯಾಗಿರುವ ರಾಜೀವನ್(60) ಸುಟ್ಟು ಕರಕಲಾಗಿ ಪತ್ತೆಯಾಗಿದ್ದು, ಮೃತದೇಹವನ್ನು ಆತನ ಪತ್ನಿ ಗುರುತಿಸಿದ್ದಾರೆ.
ಘಟನೆ ಹಿನ್ನೆಲೆ:
ಪೇಂಟರ್ ಆಗಿದ್ದ ಈತ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ರಾಜೀವನ್, ಕೊಯಿಲಾಂಡಿ ಬಳಿಯ ಉರಲ್ಲೂರು-ನಡುವನೂರು ರಸ್ತೆಯ ಜಮೀನೊಂದರ ಬಳಿಯ ನಿರ್ಜನ ಸ್ಥಳದಲ್ಲಿ ಆತನ ಸುಟ್ಟ ಶವ ಪತ್ತೆಯಾಗಿದ್ದ. ಆದರೆ ಮೃತದೇಹಕ್ಕೆ ಮೂರು ದಿನ ಹಳೆಯದಾಗಿದ್ದು, ದೇಹವನ್ನು ಸುಡಲಾಗಿತ್ತು. ಆತನ ಎರಡು ಕೈಕಾಲುಗಳು ಮೊದಲು ಪತ್ತೆಯಾದ ನಂತರ ಪೊಲೀಸರು ಡ್ರೋನ್ ಬಳಸಿ ನಡೆಸಿದ ಹುಡುಕಾಟದಲ್ಲಿ, ಸೊಂಟದ ಮೇಲಿನ ಭಾಗವು ಹತ್ತಿರದಲ್ಲಿಯೇ ಪತ್ತೆಯಾಗಿತ್ತು. ಕೊನೆಗೆ ಕುರಿತು ಹುಡುಕಾಟ ನಡೆಸಿದಾಗ ದೇಹದ ಸಂಪೂರ್ಣ ಭಾಗಗಳು ಪತ್ತೆಯಾಗಿದ್ದವು.
ಈ ಕುರಿತು ಮಾತನಾಡಿರುವ ಪೊಲೀಸರು, ಮೃತದೇಹವನ್ನು ಸುಟ್ಟಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ಕಾರಣ ತಿಳಿಯಬಹುದಾಗಿದ್ದು, ಇದು ಕೊಲೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆತನ ಉಡುಪಿನ ಅವಶೇಷಗಳು ಸಿಕ್ಕಿದ್ದು, ಸುಟ್ಟು ಹೋಗಿರುವ ಫೋನ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.