ಬದಿಯಡ್ಕ: ಪ್ರತಿಪಕ್ಷ ನಾಯಕರನ್ನು ವಂಚನೆ ಪ್ರಕರಣಗಳಲ್ಲಿ ಸಿಲುಕಿಸಲು ಪಿಣರಾಯಿ ನೇತೃತ್ವದ ಎಡರಂಗ ಸÀರ್ಕಾರವು ಪ್ರಯತ್ನಿಸುತ್ತಿರುವುದು ಖಂಡನೀಯ. ಪಕ್ಷದ ಕಾರ್ಯಕರ್ತರು ಪಿಣರಾಯಿ ಸರ್ಕಾರದ ವಿರುದ್ಧ ತಿರುಗಿಬೀಳಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಂಕಠನ್ ಹೇಳಿದರು.
ಕಾರಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬದಿಯಡ್ಕ ಪೋಲೀಸ್ ಠಾಣೆಗೆ ನಡೆದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸುವ ಪಿಣರಾಯಿ ಸರ್ಕಾರದ ಸೇಡಿನ ರಾಜಕಾರಣದ ವಿರುದ್ಧ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ಕಾರದ ಕ್ರಮ ಪ್ರತಿಭಟಿಸಿ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾರಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗೋಪಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷರುಗಳಾದ ಪುರುಷೋತ್ತಮನ್ ಕಾರಡ್ಕ, ನಾರಾಯಣ ನೀರ್ಚಾಲ್, ಪ್ರಸಾದ್ ಭಂಡಾರಿ, ಪಿ.ಕೆ.ಶೆಟ್ಟಿ, ಮುಖಂಡರಾದ ಕೆ.ವಾರಿಜಾಕ್ಷನ್, ಚಂದ್ರಹಾಸ ರೈ, ಶ್ಯಾಮ್ ಪ್ರಸಾದ್ ಮಾನ್ಯ, ಎಂ.ಅಬ್ಬಾಸ್, ಖಾದರ್ ಮಾನ್ಯ, ಗಂಗಾಧರ ಗೋಳಿಯಡ್ಕ, ಮ್ಯಾಥ್ಯೂ ಬದಿಯಡ್ಕ, ಪಿ.ಜಯಶ್ರೀ, ಶಾರದ ಮೊದಲಾದವರು ಪಾಲ್ಗೊಂಡಿದ್ದರು.