HEALTH TIPS

ಮಸೂದೆಯಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಭಾರತೀಯ ಸಂಪಾದಕರ ಕೂಟ

            ವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ ಹಾಗೂ ನಿಯತಕಾಲಿಕಗಳ ಮುದ್ರಣ ಹಾಗೂ ನೋಂದಣಿ ಮಸೂದೆಯು ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ಭಾರತೀಯ ಸಂಪಾದಕರ ಕೂಟ ಆತಂಕ ವ್ಯಕ್ತಪಡಿಸಿದೆ.

            ಈ ಎರಡೂ ಮಸೂದೆಗಳು ಮಾಧ್ಯಮ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ನಿರ್ಬಂಧಿಸುತ್ತವೆ. ಸಂಸ್ಥೆಗಳ ಮೇಲೆ ಸೆನ್ಸಾರ್‌ಶಿಪ್‌ನ ಹಿಡಿತ ಹಾಗೂ ಅನಿಯಂತ್ರಿತ ತಪಾಸಣೆಗೆ ಒತ್ತು ನೀಡುತ್ತವೆ. ಹಾಗಾಗಿ, ಕೂಡಲೇ ಲೋಕಸಭೆಯ ಸ್ಪೀಕರ್‌ ಹಾಗೂ ರಾಜ್ಯಸಭಾ ಸಭಾಪತಿ ಅವರು, ಈ ಮಸೂದೆಗಳನ್ನು ಸಂಸದೀಯ ಸಮಿತಿಯ ಮರುಪರಿಶೀಲನೆಗಾಗಿ ವಾಪಸ್‌ ಕಳುಹಿಸಬೇಕು ಎಂದು ಕೂಟವು ಒತ್ತಾಯಿಸಿದೆ.

ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಸಂಸತ್‌ನ ಕೆಳಮನೆಯಲ್ಲಿ ಸೋಮವಾರ ಮಂಡಿಸುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries