ತಿರುವನಂತಪುರಂ: ಕುಟುಂಬಶ್ರೀ ನಡೆಸುವ ಜನಪ್ರಿಯ ಹೋಟೆಲ್‍ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಬೆಲೆ ಏಕಾಏಕಿ ಹೆಚ್ಚಿಸಲಾಗಿದೆ. ಈ ಬಗ್ಗೆ ಆದೇಶ ಜಾರಿಯಾಗಿದ್ದು, ಇನ್ನು ಮುಂದೆ ಕುಟುಂಬಶ್ರೀ ಹೋಟೆಲ್‍ಗಳಲ್ಲಿ ಊಟಕ್ಕೆ 30 ರೂ., ಹಾಗೂ ಪಾರ್ಸೆಲ್‍ಗೆ 35 ರೂ. ಪಾವತಿಸಬೇಕು.
ಅನೇಕ ಜನ ಸಾಮಾನ್ಯರು ಅವಲಂಬಿಸಿರುವ ಜನಪ್ರಿಯ ಹೋಟೆಲ್‍ಗಳ ದರವನ್ನು ಸರ್ಕಾರವು ಒಂದೇ ಬಾರಿಗೆ ಶೇಕಡಾ 50 ಕ್ಕಿಂತ ಹೆಚ್ಚು ಹೆಚ್ಚಿಸಿದೆ. ರಾಜ್ಯದ ಕುಟುಂಬಶ್ರೀ ಹೋಟೆಲ್‍ಗಳಿಗೆ ಎಂಟು ತಿಂಗಳಿನಿಂದ ಸಬ್ಸಿಡಿ ಸಿಕ್ಕಿಲ್ಲ. ಪ್ರತಿ ಹೋಟೆಲ್‍ಗೆ 6 ರಿಂದ 7 ಲಕ್ಷ ರೂ.ವರೆಗೆ ಲಭಿಸಲು ಬಾಕಿಯಿದೆ. ಸದ್ಯ ಪ್ರತಿ ಜಿಲ್ಲೆಯಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಸಬ್ಸಿಡಿ ಬಾಕಿ ಇದೆ. ಪ್ರತಿ ಹೋಟೆಲು ಸಾಲ ಮಾಡಿ ನಡೆಯುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಹೋಟೆಲ್ ನವರು ಸರ್ಕಾರಕ್ಕೆ ಮೊರೆ ಹೋಗಿದ್ದರು. ಇದರಿಂದ ದರ ಏರಿಕೆ ಮಾಡಲಾಗಿದೆ.
ಮೊದಲ ಪಿಣರಾಯಿ ಸರ್ಕಾರದ ‘ಹಸಿವು ಮುಕ್ತ ಕೇರಳ’ ಯೋಜನೆಯ ಭಾಗವಾಗಿ ಜನಪ್ರಿಯ ಹೋಟೆಲ್ ಅನ್ನು ಜಾರಿಗೆ ತರಲಾಗಿತ್ತು. ಕುಟುಂಬಶ್ರೀ ಅಡಿಯಲ್ಲಿ 1000 ಜನಪ್ರಿಯ ಹೋಟೆಲ್‍ಗಳನ್ನು ಪ್ರಾರಂಭಿಸಲಾಗಿತ್ತು.