ಮಂಜೇಶ್ವರ: ವಿಶ್ವಹಿಂದು ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕದ 20ನೇ ವರುಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಅರಸು ಸಂಕಲ ಭವನ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕದಲ್ಲಿ ಶುಕ್ರವಾರ ಜರಗಿತು.
ಈ ಸಂದರ್ಭ ನಡದ ಧಾರ್ಮಿಕ ಸಭೆಯಲ್ಲಿ ಡಾ. ಶೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೇರಳ ಪ್ರಾಂತ್ಯ ಕಾಸರಗೋಡು ಜಿಲ್ಲಾ ಪ್ರಚಾರ ಪ್ರಮುಖ್ ಜಗದೀಶ್ ಪ್ರತಾಪ ನಗರ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಶ್ರೀ ವರಮಹಾಲಕ್ಷ್ಮೀ ವೃತ ದೇಶದ ಎಲ್ಲೆಡೆ ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ಮುನ್ನಡೆಸುತ್ತಿರುವ ಅತೀ ದೊಡ್ಡ ಮಾತೆಯರ ಹಬ್ಬ. ಹಿಂದೂ ಧರ್ಮ ಉಳಿಯಬೇಕೆಂದರೆ ಇಂತಹಾ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತೀ ಮುಖ್ಯವಾಗಿದೆ ಎಂದರು. ಧರ್ಮ ಗ್ರಂಥಗಳಲ್ಲೊಂದಾದ ಭಗವದ್ಗೀತೆಯನ್ನು ಸರಿಯಾಗಿ ಅರಿತುಕೊಳ್ಳಬೇಕೆಂದರೆ ತಾಯಂದಿರ ಪಾತ್ರ ಮುಖ್ಯ. ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕೇಂದರು. ಧರ್ಮ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕೆಂದರು.
ಸಿಡಿಎಸ್ ಅಧ್ಯಕ್ಷೆ ಶಾಲಿನಿ ಬಿ ಶೆಟ್ಟಿ ಕಳ್ಳಿಗೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಮೊಬೈಲ್ ಹವೆಯಲ್ಲಿ ಮುಳುಗಿರುವ ಹೊಸ ಪೀಳಿಗೆಯ ಮಕ್ಕಳನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೇರ್ಪಡೆಗೊಳಿಸಿ ಹಿಂದೂ ಸನಾತನ ಸಂಸ್ಕøತಿಯನ್ನು ಎತ್ತಿ ಹಿಡಿಯುವಂತೆ ಪ್ರೇರೇಪಿಸಬೇಕೆಂದರು.
ಕುಟುಂಬಶ್ರೀ ಆಯೋಜಿಸಿದ್ದ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಕಥಾ ಮತ್ತು ಸಾಹಿತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಜಯಲಕ್ಷ್ಮಿ ಶೆಟ್ಟಿ ಚಿಗುರುಪಾದೆ ಇವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಜಯಲಕ್ಷ್ಮಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಆಶಲತಾ ಬಿ.ಎಂ ಸ್ವಾಗತಿಸಿ, ಸಾಹಿತ್ ಶೆಟ್ಟಿ ವಂದಿಸಿದರು. ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಲ್ಲಿ ಶ್ರೀ ವರಮಹಾಲ್ಕಕ್ಷೀ ಪೂಜೆ ಜರಗಿತು. ಮಧ್ಯಾಹ್ನ ಅನ್ನಸಂತರ್ಪಣೆಯೊದಿಗೆ ಸಂಪನ್ನವಾಯಿತು.