HEALTH TIPS

ಪತ್ರಿಕೆ, ನಿಯತಕಾಲಿಕಗಳ ನೋಂದಣಿ ಸರಳೀಕರಣ: ಮಸೂದೆ ಅಂಗೀಕಾರ

                ವದೆಹಲಿ: 'ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗಳ ವ್ಯವಹಾರ ಸುಲಭಗೊಳಿಸುವ, ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಂಬಂಧ ಹಾಲಿ ಇರುವ ಹಳೆಯದಾದ ಕಠಿಣ ನಿಯಮಗಳನ್ನು ತೆಗೆದುಹಾಕುವ 'ಪತ್ರಿಕೆಗಳು ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ-2023 ಅನ್ನು ರಾಜ್ಯಸಭೆ ಗುರುವಾರ ಧ್ವನಿ ಮತದಿಂದ ಅಂಗೀಕರಿಸಿದೆ.

             ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್‌ 'ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗಳ ವ್ಯವಹಾರವನ್ನು ಸುಗಮಗೊಳಿಸಲು ಈ ಮಸೂದೆ ತರಲಾಗಿದೆ. ನೌಕರಶಾಹಿಯ ಹೊರೆಯು ಕಡಿಮೆಯಾಗಲಿದೆ' ಎಂದು ಹೇಳಿದರು.

            'ಭಯೋತ್ಪಾದಕ ಚಟುವಟಿಕೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪತ್ರಿಕೆ ಅಥವಾ ನಿಯತಕಾಲಿಕವನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ' ಎಂದು ಅವರು ತಿಳಿಸಿದರು.

                ಈ ಮಸೂದೆಯು ಪ್ರೆಸ್‌ ಮತ್ತು ರಿಜಿಸ್ಟ್ರೇಷನ್‌ ಆಫ್‌ ಬುಕ್ಸ್‌ (ಪಿಆರ್‌ಬಿ) ಕಾಯ್ದೆ-1867 ಅನ್ನು ಬದಲಿಸಲಿದೆ.

                 ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಮತ್ತು ಜೈಲುವಾಸದ ನಿಬಂಧನೆಯನ್ನು ಬಿಟ್ಟು ನೋಂದಣಿ ಪ್ರಕ್ರಿಯೆಯನ್ನು ಸರಳೀಕರಿಸುವ ಈ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅನುಮೋದಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries