ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ದ ಬಜೆಟ್ ಟೂರಿಸಂ ಸಂಬಂಧಿಸಿದಂತೆ ಕಾಸರಗೋಡು ಘಟಕದಿಂದ ಆಗಸ್ಟ್ 19 ರಂದು ಮುನ್ನಾರಿಗೆ ಪ್ರವಾಸ ಆಯೋಜಿಸಲಾಗಿದೆ.. ಇಡುಕ್ಕಿಯ ಕುಂಡಲ ಡ್ಯಾಮ್, ಇಕ್ಕೋ ಪಾಯಿಂಟ್, ಮಾಟ್ಟುಪೆಟ್ಟಿ ಡ್ಯಾಮ್, ಬೋಟನಿಕಲ್ ಗಾರ್ಡನ್, ಫ್ಲವರ್ ಗಾರ್ಡನ್, ಇರವಿಕುಲಂ ನ್ಯಾಷನಲ್ ಪಾರ್ಕ್, ಕಲ್ಲಾರ್ ಕುಟ್ಟಿ ಡ್ಯಾಮ್, ಪೂಪ್ಪಾರ, ಚತುರಂಗಪ್ಪಾರ, ಗ್ಯಾಪ್ ರೋಡ್ ಇತ್ಯಾದಿ ಸ್ಥಳಗಳನ್ನು ಒಳಗೊಂಡಂತೆ ಪ್ರವಾಸ ವನ್ನು ಆಯೋಜಿಸಲಾಗಿದೆ.