ಕಾಸರಗೋಡು: ಕೇರಳಾದ್ಯಂತ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಕರಾವಳಿ ಪ್ರದೇಶದ ಜನರು ಹಾಗೂ ಮೀನುಗಾರರು ಜಾಗ್ರತೆ ಪಾಲಿಸುವಂತೆ ರಾಷ್ಟ್ರೀಯ ಸಮುದ್ರ ಸ್ಥಿತಿ ಅಧ್ಯಯನ ಮತ್ತು ಸಂಶೋಧನಾ Éೀಂದ್ರ(ಐಎನ್‍ಸಿಓಐಎಸ್)ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಿರುವನಂತಪುರದಿಂದ ಕಾಸರಗೋಡು ವರೆಗಿನ ಸಮುದ್ರದಲ್ಲಿ ಆ. 2ರ ರಾತ್ರಿ11.30ರ ವರೆಗೆ ಈ ಬೃಹತ್ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಇದು ಭಾರಿ ಕಡಲ್ಕೊರೆತಕ್ಕೂ ಹಾದಿಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಹಾಗೂ ಪ್ರವಾಸಿಗರನ್ನು ಬೀಚ್‍ನಲ್ಲಿ ಸುತ್ತಾಡದಂತೆ ನಿಯಂತ್ರಣವೇರ್ಪಡಿಸಬೇಕು. ಮೀನುಗರಿಕಾ ಬೋಟುಗಳನ್ನು ಸಮುದ್ರಬದಿ ಸೂಕ್ತ ರೀತಿಯಲ್ಲಿ ಲಂಗರು ಹಾಕಿ ಬಿಗಿಯುವಂತೆಯೂ ಸೂಚಿಸಲಾಗಿದೆ.