ಕಾಸರಗೋಡು: ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಮಹಾಸಭೆ ಕರಂದಕ್ಕಾಡು ಶಿವಾಜಿ ನಗರದ ಶ್ರೀ ವಿಶ್ವಕರ್ಮ ಭಜನಾಮಂದಿರದಲ್ಲಿ ಜರಗಿತು. ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಅಧ್ಯಕ್ಷತೆವಹಿಸಿದ್ದರು. ಮಂದಿರದ ಬಳಿ ಉಪಹಾರ ಗೃಹ (ಡೈನಿಂಗ್‍ಹಾಲ್)ನಿರ್ಮಿಸುವ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಈ ಅಭಿವೃದ್ಧಿ ಕಾರ್ಯದಲ್ಲಿ ಸಮಾಜಬಾಂಧವರ ಸಹಕಾರ ಕೋರಲಾಯಿತು.
ಕಾರ್ಯದರ್ಶಿ ಗಣೇಶ ಆಚಾರ್ಯ ಕೊರಕ್ಕೋಡು ವರದಿ, ಕೋಶಾಧಿಕಾರಿ ಎನ್.ಆರ್. ಪವೀಣ್ ಕುಮಾರ್ ನಲ್ಕ ಲೆಕ್ಕಪತ್ರ ಮಂಡಿಸಿದರು. ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ಶೀತಲ್ ಕುಮಾರ್, ವಿಶ್ವಕರ್ಮ ಮಹಿಳಾಸಂಘದ ಅಧ್ಯಕ್ಣೆ ಕಲ್ಮಾಡಿ ವೇದಾವತಿಸದಾಶಿವ ಆಚಾರ್ಯ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಕಾರ್ಯಕರ್ತ ಪೆರ್ಣೆ ವಿಷ್ಣು ಆಚಾರ್ಯ ಇವರನ್ನು ಶಾಲುಹೊದಿಸಿ, ಸಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಜತೆಕಾರ್ಯದರ್ಶಿ ವೇಣುಗೋಪಾಲ ನೆಕ್ರಾಜೆ ಸ್ವಾಗತಿಸಿದರು. ವಸಂತ ಕೆರೆಮನೆ ವಂದಿಸಿರು.