ನವದೆಹಲಿ: ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಚೆನ್ನದ ಪದಕ ಗೆದ್ದಿರುವ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀರಜ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಚಿನ್ನದ ಪದಕ ಗೆಲ್ಲುವ ಮೂಲಕ ಶತಕೋಟಿ ಭಾರತೀಯರ ಹೃದಯವನ್ನು ಗೆದ್ದಿರುವ ನೀರಜ್ ಚೋಪ್ರಾ ಈಗ ತಾವು ಮಾಡಿದ ಕೆಲಸದಿಂದಾಗಿ ಜನತೆಯೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬುಡಾಪೆಸ್ಟ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನಂತರ ಹಂಗೇರಿ ಮೂಲದ ಅಭಿಮಾನಿ ಒಬ್ಬರು ಭಾರತದ ಧ್ವಜದ ಮೇಲೆ ಸಹಿ ಹಾಕುವಂತೆ ನೀರಜ್ ಅವರಿಗೆ ಕೇಳಿದ್ಧಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೀರಜ್ ನಾನು ಸಹಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಏಕೆಂದರೆ ನೀವು ಭಾರತದ ಧ್ವಜದ ಮೇಲೆ ನನಗೆ ಸಹಿ ಮಾಡುವಂತೆ ಹೇಳುತ್ತಿದ್ದೀರಾ ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಹಾಗೆ ಮಾಡಿದರೆ ನಾನು ರಾಷ್ಟ್ರಧ್ವಜ್ಕಕೆ ಅಪಮಾನ ಮಾಡಿದಂತೆ ಎಂದು ಮಹಿಳೆಗೆ ಅರ್ಥ ಮಾಡಿಸುತ್ತಾರೆ. ಬಳಿಕ ಆಕೆಯ ಟೀ ಶರ್ಟ್ ತೋಲಿಗೆ ಸಹಿ ಹಾಕಿ ಮುಂದೆ ಬರುತ್ತಾರೆ.
ನೀರಜ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಿಮ್ಮ ನಿಲುವು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಅವರ ನಮ್ರತೆ ಹಾಗೂ ರಾಷ್ಟ್ರಧ್ವಜದ ಮೇಲಿನ ಗೌರವ ಶ್ಲಾಘನೀಯ ಎಂದು ಕಮೆಂಟ್ ಮಾಡಲಾಗಿದೆ.