ಬದಿಯಡ್ಕ: ಕೃಷಿ ದಿನಾಚರಣೆಯ ಅಂಗವಾಗಿ ಕುಂಬ್ಡಾಜೆ ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆಯಾದ 13 ರೈತರನ್ನು ಗುರುವಾರ ಸನ್ಮಾನಿಸಲಾಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಅಧ್ಯಕ್ಷತೆ ವಹಿಸಿದ್ದರು. ಕೇರಳ ಮಿಲ್ಲೆಟ್ ಮಿಷನ್ ಮುಖ್ಯ ಸಂಯೋಜಕ ಪಿ. ಕೆ.ಲಾಲ್ ಅವರು ಕೇರಳದಲ್ಲಿ ಕಿರುಧಾನ್ಯ ಕೃಷಿಯ ಮಹತ್ವದ ಕುರಿತು ವಿಚಾರ ಸಂಕಿರಣ ನಡೆಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಎಲಿಜಬೆತ್ ಕ್ರಾಸ್ತಾ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅಬ್ದುಲ್ ರಜಾಕ್, ಸಂಜೀವ ಶೆಟ್ಟಿ, ಖದೀಜಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯೆ ನಳಿನಿ, ಕಾರಡ್ಕ ಕೃಷಿ ಸಹಾಯಕ ನಿರ್ದೇಶಕಿ ಎಸ್.ಸುಧಾ, ವಾರ್ಡ್ ಸದಸ್ಯರಾದ ಹರೀಶ್ ಗೋಸಾಡ, ಮುಮ್ತಾಜ್, ಜಿ.ಕೃಷ್ಣ ಶರ್ಮ, ಜೌರ, ಜೆ.ಸುನಿತಾ ರೈ, ಸುಂದರ ಮವ್ವಾರು, ಮೀನಾಕ್ಷಿ, ಆಯೇಷತ್ ಮರ್ಷಿದಾ, ಸಿಡಿಎಸ್ ಅಧ್ಯಕ್ಷೆ ರೋಶನಿ, ಯೋಜನಾ ಸಮಿತಿ ಉಪಾಧ್ಯಕ್ಷ ಎಸ್.ಮುಹಮ್ಮದ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಬಿ.ಟಿ.ಅಬ್ದುಲ್ಲಾ, ಪ್ರಸಾದ್ ಭಂಡಾರಿ, ಮ್ಯಾಥ್ಯೂ ತೆಂಗುಂಪಳ್ಳಿ, ಚಿ.ರಾಮಚಂದ್ರನ್, ರವೀಂದ್ರ ರೈ, ಕೃಷಿ ಅಧಿಕಾರಿ ಜೆ. ನಿಕಿತಾ, ಕೃಷಿ ಸಹಾಯಕ ಎಂ.ಪುರುμÉೂೀತ್ತಮನ್ ಮತ್ತು ಎ.ರಜಿತಾ ಮಾತನಾಡಿದರು.