ಗಾಂಧಿನಗರ : ಔಷಧ-ವೈದ್ಯಕೀಯ ಸಾಧನಗಳ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತವು ರಾಷ್ಟ್ರೀಯ ನೀತಿಯನ್ನು ಪರಿಚಯಿಸುವ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ತಿಳಿಸಿದ್ದಾರೆ.
ಗಾಂಧಿನಗರ : ಔಷಧ-ವೈದ್ಯಕೀಯ ಸಾಧನಗಳ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತವು ರಾಷ್ಟ್ರೀಯ ನೀತಿಯನ್ನು ಪರಿಚಯಿಸುವ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ತಿಳಿಸಿದ್ದಾರೆ.
ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ, ಲಭ್ಯತೆ ಮತ್ತು ಕೈಗೆಟುಕುವಿಕೆಯಲ್ಲಿ ಭಾರತದ ಬದ್ಧತೆಯು ಅಚಲವಾಗಿದೆ.
ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖರು, ಜಿ20 ಸಚಿವರು ಮತ್ತು ಪ್ರತಿನಿಧಿಗಳಿಗಾಗಿ ಗಾಂಧಿನಗರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ದೇಶಕ್ಕಿರುವ ದೂರದೃಷ್ಟಿಯ ಕುರಿತು ವಿವರಿಸಿದರು.
ಔಷಧ-ವೈದ್ಯಕೀಯ ಸಾಧನಗಳ ವಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕೈಜೋಡಿಸುವಂತೆ ವಿವಿಧ ದೇಶಗಳನ್ನು, ಉದ್ಯಮಿಗಳನ್ನು ಮತ್ತು ಸಂಶೋಧಕರನ್ನು ಸಚಿವರು ಆಹ್ವಾನಿಸಿದ್ದಾರೆ.