ನವದೆಹಲಿ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದನ್ನು ವಾಪಸ್ ಪಡೆಯಬೇಕು ಎಂದು ದೆಹಲಿ-ಎನ್‌ಸಿಆರ್ ಮೂಲದ ಕುಕಿ-ಹಮಾರ್-ಜೊಮಿ ಸಮುದಾಯಗಳ ಮಹಿಳಾ ಸಂಘಟನೆಯು ಆಗ್ರಹಿಸಿದೆ.
ನವದೆಹಲಿ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದನ್ನು ವಾಪಸ್ ಪಡೆಯಬೇಕು ಎಂದು ದೆಹಲಿ-ಎನ್‌ಸಿಆರ್ ಮೂಲದ ಕುಕಿ-ಹಮಾರ್-ಜೊಮಿ ಸಮುದಾಯಗಳ ಮಹಿಳಾ ಸಂಘಟನೆಯು ಆಗ್ರಹಿಸಿದೆ.
ಆಗಸ್ಟ್ 1ರಂದು ಕೇಂದ್ರ ಸರ್ಕಾರ ಮತ್ತು ಮಣಿಪುರ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದ ಮೆಹ್ತಾ ಅವರು, 'ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟ ವಾರಸುದಾರರಿಲ್ಲದ ಮೃತದೇಹಗಳ ಪೈಕಿ ಬಹುತೇಕವು ನುಸುಳುಕೋರರದ್ದು' ಎಂದು ಹೇಳಿದ್ದರು ಎಂದು ವರದಿಯಾಗಿದೆ.
'ತುಷಾರ್ ಅವರ ಹೇಳಿಕೆಯಿಂದ ಮಣಿಪುರದ ಕುಕಿ-ಹಮರ್-ಜೊಮಿ ಸಮುದಾಯಗಳ ತಾಯಂದಿರಿಗೆ ತೀವ್ರ ನೋವು ಮತ್ತು ಆಘಾತ ಉಂಟಾಗಿದೆ. ಸಾಲಿಸಿಟರ್ ಜನರಲ್ ಅವರಿಂದ ಇಂಥ ಹಗುರ, ಆಧಾರರಹಿತ ಹೇಳಿಕೆಗಳನ್ನು ಬಯಸುವುದಿಲ್ಲ. ಇದು ಅವರ ಹುದ್ದೆಯ ಘನತೆಗೆ ತಕ್ಕುದಲ್ಲ. ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಸ್ಥರಿಗೆ ಇದು ತೀವ್ರ ನೋವುಂಟು ಮಾಡಿದೆ' ಎಂದು ಯುಎನ್‌ಎಯು ಬಡಕಟ್ಟು ಮಹಿಳೆಯರ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.