ಬದಿಯಡ್ಕ: ಮುಂಡಿತ್ತಡ್ಕ ವಿಷ್ಣುನಗರ ಶ್ರೀ ವಿಷ್ಣು ಕಲಾವೃಂದದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಸಂಘದ ಹಿರಿಯ ಸದಸ್ಯರೂ ಮಂದಿರದ ಪ್ರಧಾನ ಅರ್ಚಕ ಭಾಸ್ಕರ ಪೂಜಾರಿ ಬೀರಿಕುಂಜ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರಗಿತು. ಸಂಘದ ಹಿರಿಯ ಸದಸ್ಯ ಚಿದಾನಂದ ಆಳ್ವ ಮಂಜಕೊಟ್ಟಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಭಾಸ್ಕರ ಪೂಜಾರಿ ಮಾತನಾಡಿ ಒಗ್ಗಟ್ಟಿನಿಂದ ಸಂಘ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು. ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಮಾಸ್ತರ್ ಮುಜುಕುಮೂಲೆ 2022-23 ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭ 2023-24 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಸಂಘದ ನೂತನ ಅಧ್ಯಕ್ಷರಾಗಿ ಮೋಕ್ಷಿತ್ ಕುಮಾರ್ ಮುಂಡಿತ್ತಡ್ಕ, ಉಪಾಧ್ಯಕ್ಷರುಗಳಾಗಿ ತಿಲಕ್ ಆರ್ ಪೂಜಾರಿ ಮತ್ತು ಸಂತೋμï ಎರ್ಮೆತ್ತೊಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಮಾಸ್ತರ್ ಮುಜುಕುಮೂಲೆ, ಜೊತೆ ಕಾರ್ಯದರ್ಶಿಗಳಾಗಿ ಪುಷ್ಪರಾಜ್ ಗುಣಾಜೆ ಮತ್ತು ಹರೀಶ್ ಇಲ್ಲಿಂಜ ಹಾಗೂ ಕೋಶಾಧಿಕಾರಿಯಾಗಿ ಪುಷ್ಪರಾಜ ಆಳ್ವ ಮಂಜಕೊಟ್ಟಿಗೆ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಸರಳಿ, ಜೊತೆ ಕಾರ್ಯದರ್ಶಿಗಳಾಗಿ ಹೇಮಚಂದ್ರ ಎರ್ಮೆತ್ತೊಟ್ಟಿ ಮತ್ತು ರಾಮ ಮುಂಡಿತ್ತಡ್ಕ, ಕಲಾ ಕಾರ್ಯದರ್ಶಿಯಾಗಿ ಸುಂದರ ಯಸ್ ಕಟ್ನಡ್ಕ, ಜೊತೆ ಕಾರ್ಯದರ್ಶಿಗಳಾಗಿ ವಾಸು ನಾಯ್ಕ ಬೀರಿಕುಂಜ ಮತ್ತು ಬಾಲಕೃಷ್ಣ ಮಾಸ್ತರ್ ಮುಜುಕುಮೂಲೆ ಆಯ್ಕೆಗೊಂಡರು. ಮೂವತ್ತು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಹಿರಿಯ ಸದಸ್ಯ ಸುಂದರ ಯಸ್ ಕಟ್ನಡ್ಕ ಸಂಘದೊಂದಿಗಿನ ಅನುಭವಗಳನ್ನು ಹಂಚಿಕೊಂಡರು. ಭಜನಾ ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ಶೇಡಿಮೂಲೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುನಿಲ್ ಮಾಸ್ತರ್ ನಿರೂಪಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪ್ರಸಾದ್ ಮುಜುಕುಮೂಲೆ ವಂದಿಸಿದರು.