ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ವತಿಯಿಂದ ವರ್ಷ ಋತು ಸಂಭ್ರಮ 'ಕೆಸರು ಗದ್ದೆ ಉತ್ಸವ'ಜುಲೈ ವರ್ಕಾಡಿ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ಸನಿಹದ ಕಾಪಿರಿ ಗದ್ದೆಯಲ್ಲಿ ಜರುಗಿತು.
ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ ಎಸ್. ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಕೆಸರುಗದ್ದೆಯಲ್ಲಿ ಕುಟುಂಬಶ್ರೀ ಸದಸ್ಯರ ವಿವಿಧ ಆಟೋಟ ಸ್ಪರ್ಧೆಗಳು, ಭತ್ತದ ಗದ್ದ ನಾಟಿ ಕರ್ಯಕ್ರಮ ನಡೆಯಿತು.