ಬೀಜಿಂಗ್: ಚೀನಾದ ನೌಕಾಪಡೆ ವಿಶ್ವದ ಅತ್ಯಂತ ಶಕ್ತಿಶಾಲಿ ಕಾಯಿಲ್ ಗನ್ ಅಭಿವೃದ್ಧಿ ಪಡಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದು ವಿದ್ಯುತ್ ಕಾಂತೀಯ ಆಧರಿತವಾಗಿ ಕಾರ್ಯನಿರ್ವಹಿಸುವ ಶಸ್ತ್ರಾಸ್ತ್ರವಾಗಿದೆ. ಹೆಚ್ಚಿನ ವೇಗ ಮತ್ತು ನಿಖರತೆಯೊಂದಿಗೆ ಸ್ಪೋಟಕಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.
ಹೇಗೆ ಕೆಲಸ ಮಾಡುತ್ತದೆ?: ಕಾಯಿಲ್ ಗನ್, ಗಾಸ್ ಗನ್ ಅಥವಾ ಮ್ಯಾಗ್ನೆಟಿಕ್ ಆಕ್ಸಿಲರೇಟರ್ ಎಂದೂ ಇದನ್ನು ಕರೆಯಲಾಗುತ್ತದೆ. ಬಂದೂಕಿನ ಬ್ಯಾರೆಲ್ನ ಉದ್ದಕ್ಕೂ ಜೋಡಿಸಲಾದ ಸುರುಳಿಗಳ ಸರಣಿಯನ್ನು ಇದು ಒಳಗೊಂಡಿರುತ್ತದೆ. ಸ್ಪೋಟಕವನ್ನು ಎತ್ತುವ ಮತ್ತು ಮುಂದೂಡಬಲ್ಲ ಕಾಂತೀಯ ಕ್ಷೇತ್ರವನ್ನು ರಚಿಸಲು ಅನುಕೂಲವಾಗುವ ರೀತಿಯಲ್ಲಿ ಪ್ರತಿಯೊಂದು ಸುರುಳಿಯನ್ನು ನಿರ್ಮಾಣ ಮಾಡಲಾಗಿದೆ. ಕಾಯಿಲ್ ಗನ್ಗಳು ಯುದ್ಧ ಸಂದರ್ಭದಲ್ಲಿ ಕ್ರಾಂತಿಯನ್ನೇ ಉಂಟುಮಾಡಬಹುದು. ಇದು ಶತ್ರು ಸೇನೆಯ ಮೇಲೆ ವೇಗವಾಗಿ, ಹೆಚ್ಚು ನಿಖರ ಮತ್ತು ವಿನಾಶಕಾರಿ ದಾಳಿಗಳನ್ನು ಮಾಡುತ್ತದೆ. ಕ್ಷಿಪಣಿಗಳನ್ನು ಉಡಾಯಿಸಲೂ ಕಾಯಿಲ್ ಗನ್ಗಳನ್ನು ಬಳಸಬಹುದು.
ಸೋಷಿಯಲ್ವಿುೕಡಿಯಾದಿಂದ ದೂರ ಇರಿ
ನವದೆಹಲಿ: ಆನ್ಲೈನ್ನಲ್ಲಿ ಫೋಟೋ ಅಪ್ಲೋಡ್ ಮಾಡದಂತೆ ಹಾಗೂ ಯಾವುದೇ ಅಪರಿಚಿತ ವ್ಯಕ್ತಿಗಳ ಗೆಳೆತನ ಮಾಡದಂತೆ ಕೇಂದ್ರ ಪೊಲೀಸ್ ಪಡೆ ತನ್ನ ಸಿಬ್ಬಂದಿಗೆ ಸೂಚಿಸಿದೆ. ವಿವಿಧ ಅರೆಸೇನಾ ಪಡೆ ಹಾಗೂ ಪೊಲೀಸ್ ಮತ್ತು ಕೇಂದ್ರಗುಪ್ತಚರ ಸಂಸ್ಥೆಗಳು ತಮ್ಮಪಡೆಗಳಿಗೆ ಪತ್ರ ಕಳುಹಿಸಿದ್ದು, ಸಮವಸ್ತ್ರದಲ್ಲಿರುವ ಫೋಟೋ ಅಥವಾ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳ ತಮ್ಮ ಪ್ರೊಫೈಲ್ನಲ್ಲಿ ಪೋಸ್ಟ್ ಮಾಡಬಾರದು. ಪರಿಚಯ ಇಲ್ಲದ ವ್ಯಕ್ತಿಯ ಸ್ನೇಹ ಮಾಡಬಾರದು ಎಂದು ಸೂಚಿಸಿವೆ. ಒಂದು ವೇಳೆ ಸೂಚನೆ ಉಲ್ಲಂಘನೆ ಮಾಡಿದರೆ ಕಠಿಣಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿವೆ. ಹನಿಟ್ರಾಯಪ್ಗೆ ಒಳಗಾಗಿ ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಅಪಾಯದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಯಾವುದೇ ಗುಂಪಿನ ಬಗ್ಗೆ ಅವಹೇಳಕಾರಿ ಪೋಸ್ಟ್ ಮಾಡಬಾರದು. ಕರ್ತವ್ಯದಲ್ಲಿರುವಾಗ ಪೊಲೀಸ್ ಸಿಬ್ಬಂದಿ ಸಾಮಾಜಿಕ ಮಾಧ್ಯಮ ಬಳಸಬಾರದು.
| ಸಂಜಯ್ ಅರೋರಾ, ದೆಹಲಿ ಪೊಲೀಸ್ ಕಮಿಷನರ್
ಪಾಕ್ ಜತೆ ಸಂಪರ್ಕ?: ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ನಲ್ಲಿ ನಿಯೋಜಿಸಿದ್ದ ಕಾನ್ಸ್ಟೇಬಲ್ ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದದ್ದು ಕಂಡುಬಂದಿದೆ. ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ತಮ್ಮನ್ನು ಹಿರಿಯ ಅಧಿಕಾರಿಗಳು ಎಂದು ಪರಿಚಯಿಸುಕೊಳ್ಳುವ ಮೂಲಕ ವಿವಿಧ ಪಡೆಗಳ ನಿಯಂತ್ರಣ ಕೊಠಡಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.