ನವದೆಹಲಿ: ಸಿಮ್ ಕಾರ್ಡ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ, ವಂಚನೆಯ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಕ್ಕಾಗಿ ಬೃಹತ್ ಸಂಖ್ಯೆಯಗಲ್ಲಿನ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಕೇಂದ್ರ ಸರ್ಕಾರ 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ರದ್ದುಗೊಳಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 67,000 ಡೀಲರ್ ಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದರೆ, 300 ಎಫ್ಐಆರ್ ಗಳನ್ನು ಸಿಮ್ ಕಾರ್ಡ್ ಡೀಲರ್ ಗಳ ವಿರುದ್ಧ ಮೇ ತಿಂಗಳಿನಿಂದ ಈ ವರೆಗೂ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ವಂಚನೆಯ ಚಟುವಟಿಕೆಗಳಲ್ಲಿ ತೊಡಗಿದ್ದ 66,000 ಖಾತೆಗಳನ್ನು ವಾಟ್ಸ್ ಆಪ್ ಸ್ವಯಂ ಪ್ರೇರಿತವಾಗಿ ರದ್ದುಗೊಳಿಸಿದೆ.
ನಿಯಮ ಉಲ್ಲಂಘನೆ ಮಾಡುವ ಡೀಲರ್ ಗಳಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. 10 ಲಕ್ಷ ಸಿಮ್ ಡೀಲರ್ ಗಳಿದ್ದು, ಪೊಲೀಸ್ ಪರಿಶೀಲನೆಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಬೃಹತ್ ಸಂಖ್ಯೆಯಗಲ್ಲಿನ ಸಂಪರ್ಕಗಳನ್ನು ಪಡೆಯುವುದನ್ನು ಸ್ಥಗಿತಗೊಳಿಸಿ, ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ. "ಅಲ್ಲದೆ, ವ್ಯವಹಾರಗಳ KYC, SIM ಹಸ್ತಾಂತರಿಸುವ ವ್ಯಕ್ತಿಯ KYC ಅನ್ನು ಸಹ ಮಾಡಲಾಗುತ್ತದೆ" ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ.