ತಿರುವನಂತಪುರಂ: ಶೈಕ್ಷಣಿಕ ವರ್ಷದ ಆರಂಭದಿಂದ ಬಾಕಿ ಉಳಿದಿರುವ ವೇತನ ಮತ್ತಷ್ಟು ವಿಳಂಬವಾದರೆ ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ದಿನವೇತನ ಆಧಾರದಲ್ಲಿ ಭೋಧನಾ ನಿರತರಾಗಿರುವ ಶಿಕ್ಷಕರಿಗೆ ಓಣಂ ನೀರಸ ಮತ್ತು ಸವಾಲಿನ ವಾತಾವರಣ ಸೃಷ್ಟಿಸುವ ಸಾಧ್ಯತೆ ಇದೆ. ಶಾಲೆಗಳಲ್ಲಿನ ಕಾಯಂ ಶಿಕ್ಷಕರ ಕೊರತೆಯನ್ನು ನೀಗಿಸಲು ಸಾಮಾನ್ಯ ಶಿಕ್ಷಣ ಇಲಾಖೆಯು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ವರ್ಷ ಅತಿಥಿ ಶಿಕ್ಷಕರನ್ನು ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿತ್ತು. ಜೂನ್‍ನಲ್ಲಿ ಆಯಾ ಶಾಲೆಗಳ ಪ್ರಾಂಶುಪಾಲರು/ಮುಖ್ಯಶಿಕ್ಷಕರು ನೇಮಕಾತಿ ಪ್ರಕ್ರಿಯೆ ನಡೆಸಿದ್ದರು.
ಹೆಚ್ಚಿನ ಅರ್ಹತೆ ಹೊಂದಿರುವ ಹೆಚ್ಚಿನ ಅತಿಥಿ ಶಿಕ್ಷಕರು ನಿಯಮಿತ ನೇಮಕಾತಿಯ ಕೊರತೆಯಿಂದ ತಾತ್ಕಾಲಿಕ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಾತ್ಕಾಲಿಕ ಹೈಯರ್ ಸೆಕೆಂಡರಿ ಬ್ಯಾಚ್‍ಗಳನ್ನು ಮಂಜೂರು ಮಾಡಿರುವ ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಅಲ್ಪಸ್ವಲ್ಪ ದಿನಗೂಲಿಯೊಂದಿಗೆ ಪ್ಲಸ್ ಟು ವಿಭಾಗದಲ್ಲಿ ಬೋಧನೆ ಮಾಡುವುದರ ಜೊತೆಗೆ ಆಡಳಿತಾತ್ಮಕ ಕೆಲಸದಲ್ಲಿಯೂ ಸಹಕರಿಸುತ್ತಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಅತಿಥಿ ಶಿಕ್ಷಕರಿಗೆ ದಿನಗೂಲಿ 955 ಮತ್ತು 1,050 ರೂ.
ಹೈಯರ್ ಸೆಕೆಂಡರಿ (ಜೂನಿಯರ್) ಅತಿಥಿ ಶಿಕ್ಷಕರಿಗೆ ದಿನಕ್ಕೆ 1,205 ರೂ., ಹೈಯರ್ ಸೆಕೆಂಡರಿ ಶಿಕ್ಷಕರಿಗೆ 1,455 ರೂ. ತಿಂಗಳಿಗೆ ಸರಾಸರಿ 12-15 ದಿನ ಬೋಧನೆ ಮಾಡುವುದರಿಂದ ಅತಿಥಿ ಶಿಕ್ಷಕರಿಗೆ ಮಾಸಿಕ ವೇತನ 14,000 ರೂ.ನಿಂದ 22,000 ರೂ.ವರೆಗೆ ಏತನ ಲಭಿಸುತ್ತದೆ.
ಸರ್ಕಾರವು ಪ್ರತಿ ವರ್ಷ ಹೊಸ ಬ್ಯಾಚ್‍ಗಳನ್ನು ಮಂಜೂರು ಮಾಡುತ್ತದೆ ಮತ್ತು ಬೊಕ್ಕಸಕ್ಕೆ ಕಡಿಮೆ ಹೊರೆಯಾಗುವುದರಿಂದ ಅತಿಥಿ ಶಿಕ್ಷಕರ ಮಾರ್ಗದ ಮೂಲಕ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡುತ್ತದೆ ಎಂದು ಗಮನಸೆಳೆದಿದೆ. ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ವೇತನ ವಿಳಂಬ ಮಾಡುತ್ತಿದ್ದಾರೆ ಎಂಬುದು ಅತಿಥಿ ಶಿಕ್ಷಕರ ಆರೋಪ.
"ಸ್ಪಾರ್ಕ್' ಸಂಬಳ ವಿತರಣಾ ಸಾಫ್ಟ್‍ವೇರ್‍ನಲ್ಲಿನ ಸಮಸ್ಯೆಗಳಿಂದ ವಿಳಂಬವಾಗಿದೆ ಎಂದು ತಿಳಿಸಲಾಗಿದೆ. ಈ ವರ್ಷದ ಮೇ ವರೆಗೆ ಅತಿಥಿ ಶಿಕ್ಷಕರಿಗೆ ಸ್ಪಾರ್ಕ್‍ನಲ್ಲಿ ತಾತ್ಕಾಲಿಕ ಗುರುತಿನ ಚೀಟಿ ನೀಡುವುದು ಹಣಕಾಸು ಇಲಾಖೆಯ ಜವಾಬ್ದಾರಿಯಾಗಿತ್ತು. ಜವಾಬ್ದಾರಿಯನ್ನು ಸಾಮಾನ್ಯ ಶಿಕ್ಷಣ ನಿರ್ದೇಶನಾಲಯಕ್ಕೆ ವರ್ಗಾಯಿಸಿದ ನಂತರ, ವೇತನವು ವಿಪರೀತ ವಿಳಂಬವಾಗಿದೆ, ”ಎಂದು ಹೆಸರು ಹೇಳಲಿಚ್ಚಿಸದ ಅತಿಥಿ ಶಿಕ್ಷಕರೊಬ್ಬರು ಹೇಳಿರುವರು.
ಸಾಮಾನ್ಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಸ್ಪಾರ್ಕ್ ವೇತನ ವಿತರಣೆ ಸಾಫ್ಟ್‍ವೇರ್‍ಗೆ ಸಂಬಂಧಿಸಿದ 'ತಾಂತ್ರಿಕ ಸಮಸ್ಯೆಗಳನ್ನು' ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಹೇಳಿರುವÀರು. “ಒಂದು ಇಲಾಖೆಯಿಂದ ಇನ್ನೊಂದಕ್ಕೆ ಪ್ರಕ್ರಿಯೆಯ ಪರಿವರ್ತನೆಯಾಗುವಾಗಿನ ಕೆಲವು ತೊಂದರೆಗಳಿಂದ ವಿಳಂಬವಾಗಿದೆ. ಶೀಘ್ರದಲ್ಲೇ ಇದನ್ನು ಪರಿಹರಿಸಲಾಗುವುದು, ”ಎಂದು ಅಧಿಕಾರಿ ಹೇಳಿರುವರು.